ಕುಂದಾಪುರ, ಆ.8: ಎ.ಝೆಡ್ ಮಾರಿಟೆಯೆಲ್ ಆರ್ಟ್ಸ್ ಅಕಾಡೆಮಿ ಇಂಡಿಯಾ ಶಿವಮೊಗ್ಗ, ಇವರು ಅಗೋಸ್ತ್ 4 ರಂದು ನಡೆಸಿದ ಅಂತಾರಾಷ್ಟ್ರೀಯ ಮಟ್ಟದ ಇಂಟರ್ ನೇಶನಲ್ ಓಪನ್ ಕರಾಟೆ ಚಾಂಪಿಯನ್ ಸ್ಫರ್ಧೆಯಲ್ಲಿ ಕುಂದಾಪುರದ ಆರ್ನೊನ್ ಡಿಆಲ್ಮೇಡಾ 10 ರಿಂದ 11 ವರ್ಷದ ವಯೋಮಿತಿಯಲ್ಲಿ ಕಟಾ ಮತ್ತು ಕುಮಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾನೆ . ಈತ ಕುಂದಾಪುರದ ನಿವಾಸಿ ವಿಲ್ಸನ್ ಹಾಗೂ ಜ್ಯೋತಿ ಡಿಆಲ್ಮೇಡಾ ದಂಪತಿಯ ಪುತ್ರನಾಗಿದ್ದು, ಈತ ಎಚ್.ಎಂ.ಎಂ. ಆಂಗ್ಲಾ ಮಾಧ್ಯಮ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ
ಈತನಿಗೆ ಕೀಯೋಷಿ ಕಿರಣ್ ಕುಂದಾಪುರ, ರೆನ್ಸಿ ಸಂದೀಪ್ ವಿ.ಕಿರಣ್, ಸೇನ್ ಸಾಹಿ ಸಿಹಾನ್, ಶೇಕ್ ಸೇನ್ ಸಾಹಿ ಶಸಾಂಕ್ ಇವರು ತರಬೇತಿ ನೀಡಿದ್ದರು.