ಕುಂದಾಪುರ: ರಕ್ತದಾನ ಶಿಬಿರ ಮತ್ತು ಉಚಿತ ಮೂಳೆ ಹಾಗೂ ನರರೋಗ ತಪಾಸಣೆ ಶಿಬಿರ

JANANUDI.COM NETWORK


ಕುಂದಾಪುರ,ಫೆ.7: ‘ಕೊವೀಡ್ 19 ರ ವೇಳೆಯಲ್ಲಿಯೂ, ನಾವು ರಕ್ತದಾನಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತವನ್ನು ಶೇಖರಿಸಿ ಹಲವರ ಪ್ರಾಣಗಳನ್ನು ರಕ್ಷಿಸಿಸಿದ್ದೇವೆ. ಕಥೊಲಿಕ್ ಸಭಾ ಸಂಸ್ಥೆಯಂತೆ ಇತರರು ಇಂತಹ ಸಮಾಜ ಸೇವೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಕ್ತದಾನಕ್ಕೆ ಸಹಕರಿಸಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇದರ ಚೇಯೆರ್ ಮೇನ್ ಎಸ್.ಜಯಕರ ಶೆಟ್ಟಿ ಹೇಳಿದರು.
ಅವರು ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಮತ್ತು ಆಯುಷ್‍ಧಾಮ ಆರ್ಥೊ ನ್ಯೂರೋ ಆಸ್ಪತ್ರೆ ಕುಂದಾಪುರ, ಇವರ ಆಶ್ರಯದಲ್ಲಿ, ಕಥೊಲಿಕ್ ಸಭಾ ಕುಂದಾಪುರ ಘಟಕದ ನೇತ್ರತ್ವದಲ್ಲಿ ದಿನಾಂಕ 7-02-21 ಆದಿತ್ಯವಾರ ನಡೆದ ರಕ್ತದಾನ ಶಿಬಿರ ಮತ್ತು ಉಚಿತ ಮೂಳೆ ಹಾಗೂ ನರರೋಗ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಹಾಗೂ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ‘ನಾವು ಮಾಡುವ ರಕ್ತದಾನವು ಹಲವರ ಜೀವವನ್ನು ಕಾಪಾಡ ಬಹುದು , ಆಶಿರ್ವಚನ ಮಾಡಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಡಾ|ಉತ್ತಮ್ ಕುಮಾರ್ ಶೆಟ್ಟಿ ಮಾತನಾಡಿ ‘ಇಂತಹ ಶಿಬಿರಗಳಿಂದ ಸಮಾಜಕ್ಕೆ ಒಳಿತಾಗುತ್ತದೆ. ಆದರಿಂದ ನಾವೆಲ್ಲಾ ಇಂತಹ ಶಿಬಿರಕ್ಕೆ ಸಹಕರಿಸಬೇಕೆಂದು’ ಹೇಳಿದರು. ಆಯುಷ್‍ಧಾಮ ಆರ್ಥೊ ನ್ಯೂರೋ ಆಸ್ಪತ್ರೆ ಕುಂದಾಪುರ ಆಡಳಿತಧಿಅಕಾರಿ ಡಾ|ವಿನಯ ಚಂದ್ರ ಶೆಟ್ಟಿ ಮಾತನಾಡಿ ‘ಇಂದು ನಮ್ಮ ಜೀವನ ಕ್ರಮದಿಂದ ನಾವು ಅನಾರೋಗ್ಯಕ್ಕೆ ಒಳಗಾಗುತಿದ್ದೆವೆ.ನಮ್ಮ ಜೀವನ ಕ್ರಮದಲ್ಲಿ ಬದಲಾವಣೆ ತರಬೇಕು. ಆಯುರ್‍ವೇದದಲ್ಲಿ ಉತ್ತಮ ವೈದ್ಯ ಪದ್ದತಿ ಇದೆ’ ಎಂದು ತಿಳಿಸಿದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷೆಯನ್ನು ವಹಿಸಿ ಅಧ್ಯಕ್ಷಿಯ ಮಾತುಗಳನ್ನಾಡಿದರು.
ಕುಂದಾಪುರ ಚರ್ಚಿನ ಆರೋಗ್ಯ ಆಯೋಗ, ಐಸಿವೈಎಮ್, ಸ್ತ್ರೀ ಸಂಘಟನೆ ಮತ್ತು ಇತರ ಸಂಘಟನೆಗಳು ಹಾಗೂ ಕುಂದಾಪುರ ವಲಯದ ಕಥೊಲಿಕ್ ಸಭಾದ ಇತರ ಘಟಕಗಳು ಈ ಶಿಬಿರದಲ್ಲಿ ಪಾಲ್ಗೊಂಡವು.
ಕುಂದಾಪುರ ಚಚಿನ ಧರ್ಮಗುರುಗಳಾದ ವಂ| ವಿಜಯ್ ಡಿಸೋಜಾ, ವಂ| ಪ್ರವೀಣ್ ಮಾರ್ಟಿಸ್, ಕುಂದಾಪುರ ವಲಯ ಸಮಿತಿಯ ನಿಯೋಜಿತೆ ಅಧ್ಯಕ್ಷೆ ಶಾಂತಿ ಪಿರೇರಾ, ಮಾಜಿ ಅಧ್ಯಕ್ಷ ಎರಿಕ್ ಗೊನ್ಸಾಲ್ವಿಸ್ ಕಥೊಲಿಕ್ ಸಭಾ ಮುಖಂಡರಾದ ವಿನೋದ್ ಕ್ರಾಸ್ಟೊ, ವಿಲ್ಸನ್ ಡಿಆಲ್ಮೇಡಾ, ಕಿರಣ್ ಕ್ರಾಸ್ತಾ, ಶೈಲಾ ಡಿ ಆಲ್ಮೇಡಾ, ಪ್ರೆಸಿಲ್ಲಾ ಮಿನೆಜೆಸ್, ವಿನಯಾ ಡಿಕೋಸ್ತಾ, ಜೂಲಿಯೆಟ್ ಪಾಯ್ಸ್, ನಿರ್ಮಲ ಡಿಸೋಜಾ ಮೈಕಲ್ ಗೊನ್ಸಾಲ್ವಿಸ್, ರೋಟರಿ ಕ್ಲಬಿನ ಜೂಡಿತ್ ಮೆಂಡೊನ್ಸಾ, ಜೊನ್ಸನ್ ಡಿ ಆಲ್ಮೇಡಾ, ಪ್ರಕಾಶ್ ಲೋಬೊ ಮತ್ತಿತರರು, ರೆಡ್ ಕ್ರಾಸಿನ ಡಾ|ಸೋನಿ ಡಿಕೋಸ್ತಾ, ಶಿವರಾಮ್ ಶೆಟ್ಟಿ, ಗಣೇಶ ಆಚಾರ್ಯ, ಸೀತಾರಾಮ್ ಶೆಟ್ಟಿ, ಸತ್ಯನಾರಯಣ ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಹಾಗೂ ಕುಂದಾಪುರ ಘಟಕದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಕಾರ್ಯದರ್ಶಿ ಮೆಲ್ವಿನ್ ಪುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಘಟಕದ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು.