

ಕುಂದಾಪುರ ;ಸ್ಥಳೀಯ ಯುಬಿಯಂಸಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿ ಎಸ್ ಐ ಕೃಪಾ ವಿದ್ಯಾಲಯ, ಇಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ರೀತಿಯ ಚಟುವಟಿಕೆಗಳಿಂದ ಕೂಡಿದ 5 ದಿನಗಳ ಶಿಬಿರವು 01/04/2025 ರಂದು ಶ್ರೀಮತಿ ಸವಿತಾ ಇವರ ಸಂಯೋಜನೆ ಹಾಗೂ ಅವರ ತಂಡದ ಮೂಲಕ ಆರಂಭವಾಯಿತು. ಕಾರ್ಯಕ್ರಮಗಳು ಶ್ರೀ ದೀಪಕ್ ತಾಂಡವ ನೃತ್ಯ ಶಾಲೆ ಇವರು ಹಾಗೂ ಗಣ್ಯರ ಸಹಕಾರದೊಂದಿಗೆ ದೀಪ ಬೆಳಗಿ ಉದ್ಘಾಟನೆಗೊಂಡಿತು.ಶ್ರೀಮತಿ ಐರಿನ್ ಸಾಲಿನ್ಸ್,ಸಂಚಾಲಕರು,ಸಿಎಸ್ಐ ಕೃಪಾ ದೇವಾಲಯದ ಧರ್ಮಗುರು ಇಮ್ಯಾನ್ಯುಯಲ್ ಜೈಕರ್ , ಮುಖ್ಯ ಶಿಕ್ಷಕಿ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ಶಿಬಿರಕ್ಕೆ ಶುಭ ಹಾರೈಸಿದರು.ದೀಪಕ್ ಇವರು ನೃತ್ಯ ಕಲಿಸಿದರು. ವಿದ್ಯಾರ್ಥಿಗಳು ಈ ಶಿಬಿರದಿಂದ ಸಂಭ್ರಮ ಪಟ್ಟರು. ಶಿಕ್ಷಕಿಯರದ ವಿಲ್ಮಾ ಧನ್ಯವಾದ ತಿಳಿಸಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು.
Kundapura U.B.M.C. English Medium School- CSI Kripa Vidyalaya hosts various activities camp

U.B.M.C. English Medium School & CSI Krupa Vidyalaya, Kundhapura a 5-day camp with various activities for the students started on 01/04/2025, organized by Mrs. Savita and her team. The programs were inaugurated by lighting the lamp with the cooperation of Shri Deepak, Tandava Dance School and dignitaries. Mrs. Irene Sallins, Convenor, CSI Krupa Temple Chaplain Emmanuel Jaikar, Head Teacher Mrs. Anita Alice D’Souza wished the camp well. Deepak taught dance. The students were excited about this camp. Teacher Wilma expressed her gratitude and conducted the sacred program.




