ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ – ಕ್ರಿಸ್ತರಾಜನ ಹಬ್ಬ


ಕುಂದಾಪುರ,ನ.21: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ “ಪವಿತ್ರ ರೋಜರಿ ಮಾತಾ” ಕುಂದಾಪುರದ ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.20 ರಂದು ನೆಡೆಯಿತು.
ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ನೆಡೆಸಿದ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ ‘ಕ್ರಿಸ್ತ ರಾಜನು ನಮ್ಮ ಹ್ರದಯದಲ್ಲಿರು ರಾಜ, ಅವನಲ್ಲಿ ಇತರ ರಾಜರಂತೆ ರಾಜ ವೈಭೋಗಳು ಇರಲಿಲ್ಲ, ವಸ್ತ್ರ ವೈಡುರ್ಯಗಳಿರಲಿಲ್ಲ, ಇವರಿಗೆ ಸರಿಯಾದ ಬಟ್ಟೆ ಕೂಡ ಇರಲಿಲ್ಲ, ನಿಲ್ಲಲು ನೆಲೆಯಿರಲಿಲ್ಲ, ಆದರೆ ನಮ್ಮನ್ನು ನಮ್ಮನ್ನು ಸ್ವರ್ಗ ಸಾಮ್ರಜ್ಯದಲ್ಲಿ ಕರೆದುಕೊಂಡು ಹೋಗಲು ಈ ಭೂಮಿಗೆ ಬಂದ ಅವರು ನೀತಿ, ಧರ್ಮದಲ್ಲಿ, ಸತ್ಯ ಪ್ರೀತಿಯಲ್ಲಿ ನಡೆಯಲು ಉಪದೇಶಿಸಿ ಇಡೀ ಜಗತ್ತಿನ ರಾಜರಾಗಿದ್ದಾರೆ, ಈ ಭೂಮಿಯ ಮೇಲಿದ್ದ ರಾಜರೆಲ್ಲ ನಶಿಸಿ ಹೋದರು, ಆದರೆ ದೇವ ಪುತ್ರನಾದ ಯೇಸುವಿನ ರಾe್ಯಕ್ಕೆ ಅಂತ್ಯ ಇರದು, ತಮ್ಮ ಮಾಂಸವನ್ನು ರೊಟ್ಟಿಯ ಮೂಲಕ ನಮಗೆ ನೀಡಿದ ಪರಮ ಪ್ರಸಾದ ಬಹಳ ಪವಿತ್ರವಾದುದು, ಅದನ್ನು ಭುಜಿಸುವರು ಮತ್ತು ನನ್ನ ರಕ್ತವನ್ನು ಪಾನ ಮಾಡುವರು ನನ್ನಲ್ಲಿ ನೆಲೆಸುತ್ತಾರೆ, ಅವರಲ್ಲಿ ನಾನು ನೆಲೆಸುತ್ತೇನೆ, ಎಂದು ಯೇಸು ಹೇಳಿದ್ದಾರೆ. ನಾವು ಹಸಿದಿರುವಾಗ ತಿನ್ನುವ ರೊಟ್ಟಿ (ಆಹಾರ) ನಮ್ಮ ಹೊಟ್ಟೆಗಾದರೆ, ಯೇಸು ನೀಡಿದ ಪರಮ ಪ್ರಸಾದ ನಮ್ಮ ಆತ್ಮಕ್ಕಾಗಿ, ಎನ್ನುತ್ತಾ ಅವರು “ಇಡೀ ವಿಶ್ವದಲ್ಲಿ ನಾವೆಲ್ಲ ಶಾಂತಿ ಪ್ರೀತಿಯಿಂದ ಜೀವಿಸಿ, ಭ್ರಾತತ್ವ ಭಾಂದವ್ಯವನ್ನು ಗಟ್ಟಿಗೊಳಿಸಬೇಕು” ಎಂದು ಸಂದೇಶ ನೀಡಿದ ಅವರು ಪರಮ ಪ್ರಸಾದದ ಮೂಲಕ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯು ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮಗಳ ಸಹ ಉಸ್ತುವಾರಿಯನ್ನು ವಹಿಸಿಕೊಂಡ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ಪೆÇೀಶಕರಾದ, ಮೊನಿಕಾ ಡಿಆಲ್ಮೇಡಾ, ಸ್ಟೀವನ್ ಡಿಆಲ್ಮೇಡಾ ಮತ್ತು ಜೆನವಿ ಡಿಆಲ್ಮೇಡಾ, ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ ಫೆರ್ನಾಂಡಿಸ್, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.