

ಕುಂದಾಪುರ, ಫೆ.23; ಸ್ಥಳೀಯ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ – ಗೈಡ್ಸ್ ಸ್ಥಾಪಕರ ದಿನಾಚರಣೆ ಪ್ರಯುಕ್ತ ಗೈಡ್ಸ್ ಫೆ. 22 ರಂದು ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದೆ ತಿಂಡಿ ತಯಾರಿ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಎಲ್ಲರೂ ಹುಮನಿಸ್ಸಿನಿಂದ ಹಲವು ಬಗ್ಗೆಯ ತಿನಿಸುಗಳನ್ನು ತಯಾರಿಸಿದರು.
ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳು ತಯಾರಿಸಿದ ತಿಂಡಿಗಳ ರುಚಿ ನೋಡಿ ಫಲಿತಾಂಶವನ್ನು ನೀಡಿದರು. ಮುಖ್ಯ ಶಿಕ್ಷಕಿ ಶಾಂತಿ ರಾಣಿ ಬರೆಟ್ಟೊ ಇವರ ಉಪಸ್ಥಿಯಲ್ಲಿ ಸ್ಫರ್ಧೆ ನೆಡೆಯಿತು.
















