ಕುಂದಾಪುರ, ಜ.21: ಇ – ಆಸ್ತಿ ತಂತ್ರಾಂಶವನ್ನು ಸರಳೀಕರಣ ಪøಕ್ರಿಯೆ ಬಗ್ಗೆ ಮಾಹಿತಿ ಕಾರ್ಯಕ್ರಮವು ಜನವರಿ 21 ರಂದು ಕುಂದಾಪುರ ಕಥೊಲಿಕ್ ಸಭಾ ಘಟಕದ ವತಿಯಿಂದ ಕುಂದಾಪುರ ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು ಸರ್ಕಾರದ ಆದೇಶದ ಅನ್ವಯ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿರು ಎಲ್ಲಾ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳ ಹಾಗೂ ಖಾಲಿ ನಿವೇಶನಗಳ ಆಸ್ತಿ ಕಣಜ ತಂತ್ರಾಂಶದಲ್ಲಿ ನಮೂದು ಮಾಡಿಕೊಳ್ಳುವ ಪೃಕ್ರಿಯೆ ಕೆಲವು ಸಮಯದ ಹಿಂದೆಯೇ ಆರಂಭವಾಗಿದೆ. ಇದು ಇನ್ನಷ್ಟು ವೇಗವಾಗಿ ಅನುಷ್ಟಾನಗೊಳಿಸ ಬೇಕಾದ ಕಾರಣ ಪುರಸಭಾ ವ್ಯಾಪ್ತಿಯಲ್ಲಿರುವ ಕುಂದಾಪುರ ರೋಜರಿ ಚರ್ಚಿನ ಕುಟುಂಬಗಳಿಗೆ ಮಾಹಿತಿ ನೀಡಲು ಕುಂದಾಪುರ ಪುರಸಭೆಯ ರೆವಿನ್ಯೂ ಅಧಿಕಾರಿ ಅಜಂನಿ ಗೌಡ ಇವರು ಮಾಹಿತಿ ನೀಡಿದರು.
“ಒಂದು ಸಲ ಇ-ಆಸ್ತಿಯ ಅಕೌಂಟ್ ಆರಂಭ ಆದಲ್ಲಿ, ಮುಂದೆ ವಾರಿಸುದಾರರಿಗೆ ತೆರಿಗೆ ಕಟ್ಟಲು ಸುಲಭವಾಗುತ್ತದೆ. ದೂರವಿರುವ (ಪರವೂರಿನಲ್ಲಿರುವರಿಗೆ) ವಾರಿಸುದಾರರು ತೆರಿಗೆ ಕಟ್ಟಲು ಸುಲಭವಾಗುತ್ತದೆ. ಈ ಬಗ್ಗೆ ಸಲಹೆ ಸೂಚನೆ ನಾವು ನೀಡಲು ಸಿದ್ದರಿದ್ದೇವೆ” ಎಂದು “ಇ-ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಲು ಬೇಕಾದ ಅಗತ್ಯ ದಾಖಲೆಗಳ ಬಗ್ಗೆ ವಿವರಿಸಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಇದು ಒಳ್ಳೆಯ ಕಾರ್ಯಕ್ರಮ ಆದರೆ ಅಷ್ಟೆ ಪ್ರಯಾಸ ಇದೆ. ಆದರೆ ನಾವೆಲ್ಲ ಇದಕ್ಕೆ ಸಹಕರಿಸೋಣ” ಎಂದು ಶುಭ ನುಡಿದರು. ಈ ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಪುರಸಭೆಯ ಸಹಾಯಕ ರೆವಿನ್ಯೂ ಅಧಿಕಾರಿ ಸತೀಶ್ ಖಾರ್ವಿ, ಪುರಸಭೆಯ ತಾಂತ್ರಿಕ ವಿಭಾಗದ ಅರುಣ್ ಡಿಸೋಜಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ನಾ, ಕಥೊಲಿಕ್ ಸಭಾದ ಪದಾಧಿಕಾರಿಗಳು, ಸದಸ್ಯರು ಮತ್ತು ಚರ್ಚಿನ ಜನತೆ ಹಾಜರಿತ್ತು.
ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ವಂದಿಸಿದರು. ಕಥೊಲಿಕ್ ಸಭಾದ ಪದಾಧಿಕಾರಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು.