ಉಡುಪಿ ಧರ್ಮಪ್ರಾಂತ್ಯದ ಹಿರಿಯ ರೋಜರಿ ಮಾತಾ ಕುಂದಾಪುರದ ಚರ್ಚಿನಲ್ಲಿ ಭಕ್ತಿ ಪೂರ್ವಕ ಮೊಂತಿ ಹಬ್ಬ

JANANUDI.COM NETWORK

ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ  ವರ್ಷ ಪೂರೈಸಿ 451 ವರ್ಷದಲ್ಲಿರುವಾಗ ಬಲು ಅಪರೂಪ 450 ವರ್ಷದ ಸಮಾರೋಪ ಸಂಭ್ರಮದ ಹಂತದಲ್ಲಿರುವ ಐತಿಹಾಸಿಕ ಚರಿತ್ರೆವುಳ್ಳ ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆಯನ್ನು ಪವಿತ್ರ ಬಲಿದಾನದ ಮೂಲಕ ಅರ್ಪಿಸಿ ಆಚರಿಸಲಾಯಿತು. 

ಅತಿಥಿ ಗುರುಗಳಾದ ತ್ರಾಸಿ ಡೋನ್ ಬೊಸ್ಕೊ ಸಂಸ್ಥೆಯ ವಂ|ಮರ್ವಿನ್ ಫೆರ್ನಾಂಡಿಸ್ ಬಲಿದಾನ ಅರ್ಪಿಸಿ ’ಮೊಂತಿ ಹಬ್ಬವೆಂವುದು ನಾವು ಆಚರಿಸುವ ಹಬ್ಬಗಳಲ್ಲಿ ವಿಶಿಷ್ಠವಾದ ಹಬ್ಬವಾಗಿದೆ, ಮೇರಿ ಮಾತೆಯ ಮಾತ ಪಿತರು ಕನ್ಯೆ ಮರಿಯಮ್ಮಳನ್ನು ಸನ್ಮಾರ್ಗದಲ್ಲಿ ದೇವ ಭಕ್ತಿಯಿಂದ ಪೋಶಿಸಿದರು, ಅಂತೇಯೆ  ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸನ್ಮಾರ್ಗದಲ್ಲಿ ಪೋಶಿಸಬೇಕು, ಮೇರಿ ಮಾತೆ ಕಳಂಕ ರಹಿತೆ, ಹೆಣ್ಣು ಮಕ್ಕಳಿಗೆ ಆದರ್ಶೆ, ಅವಳು ಹೆಣ್ಣು ಮಕ್ಕಳಿಗೆ ಮಾರ್ಗದರ್ಶಕಿ, ಮಾತ್ರವಲ್ಲ ಇದೊಂದು ಕುಟುಂಬದ ಹಬ್ಬ, ಎಸುವಿನ ಕುಟುಂಬ ಪವಿತ್ರ ಕುಟುಂಬ ಇದು ನಮಗೆ ಆದರ್ಶವಾಗಲಿ’ ಎಂದು ಸಂದೇಶ ನೀಡಿದರು.

ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೊಸ ತೆನೆಗಳನ್ನು ಆಶಿರ್ವಾದಿಸಿ, ಪವಿತ್ರ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಷಯವನ್ನು ನೀಡಿದರು. ಸಹಾಯಕ ಧರ್ಮಗುರು ವಂ| ವಿಜಯ್ ಜೊಯ್ಸನ್ ಡಿಸೋಜಾ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಚಟುವಟಿ ನಿರ್ವಹಿಸಿ ಸಹಕರಿಸಿದರು.