JANANUDI.COM NETWORK
[ಲಾಕ್‌ಡೌನ್ ವೇಳೆ ಕುಂದಾಪುರದಲ್ಲಿ ಔಷಧ ಖರೀದಿಸಲು ಮೆಡಿಕಲ್‌ಗೆ ಬಂದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶ್ವನಾಥ ಭಟ್ ಇವರ ಮೇಲೆ ಕರ್ಫ್ಯೂ ಉಲ್ಲಂಘನೆ ಮಾಡಿದ್ದಾನೆ ಎಂದು ಲಾಠಿ ಏಟು ಬಾರಿಸಿ ಪ್ರಕರಣ ದಾಖಲಿಸಿದ್ದರು. ಮೇಲಿಂದ ಮೇಲೆ ಪೋಲೀಸರ ಸರ್ಕಾರದ ವರ್ತನೆ ಅತಿರೇಕ ವಾಗಿದ್ದುಸಾನ್ಯರಿಗೆ ಕಂಡು ಬಂದಿತ್ತು. ಮಾಸ್ಕ ಹಾಕಲಿಲ್ಲವೆಂದರೆ ದಂಡ ಹಾಕಬಹುದಿತ್ತು ಆದರೆ ಲಾಠಿ ಏಟು ಬಾರಿಸುವ ಅಗತ್ಯವಿರಲಿಲ್ಲ, ಇದೀಗ ಈ ಪ್ರಕರಣಕ್ಕೆ ಹೈ ಕೋರ್ಟ್ ತೀರ್ಪು ನೀಡಿದೆ ]
ಕುಂದಾಪುರ: ಕೊರೊನಾದ ಮೊದಲ ಲಾಕ್‌ಡೌನ್ ವೇಳೆ ಕುಂದಾಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶ್ವನಾಥ ಭಟ್ ಅವರ ವಿರುದ್ಧ ದಾಖಲಾಗಿದ್ದ ಕರ್ಫ್ಯೂ ಉಲ್ಲಂಘನೆ ಪ್ರಕರಣವನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ.
ಹೈಕೋರ್ಟ್ ನ್ಯಾಯವಾದಿ ಪವನ್‌ಚಂದ್ರ ಶೆಟ್ಟಿ ಅವರು ಸಂತ್ರಸ್ತ ವಿದ್ಯಾರ್ಥಿ ವಿಶ್ವನಾಥ್ ಭಟ್ ಮೇಲಿನ ದೂರನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಾದಿಸಿದ್ದು . ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶ ನಾಗಪ್ರಸನ್ನ ಅವರು ಎಫ್‌ಐಆರ್, ಜಾರ್ಜ್‌ಶೀಟ್ ಹಾಗೂ ಕೆಳ ನ್ಯಾಯಾಲಯದ ತೀರ್ಪನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ.ಪ್ರಕರಣ ಹಿನ್ನಲೆ: ವಿದ್ಯಾರ್ಥಿ ವಿಶ್ವನಾಥ್ ವಿರುದ್ಧ ಕುಂದಾಪುರದ ಪಿಎಸ್‌ಐ ಹರೀಶ್ ಅವರು ಸಹಾಯಕ ಕಮಿಷನರ್ ರಾಜು ಕೆ. ನಿರ್ದೇಶನದ ಅನುಸಾರ 2020ರ ಮಾ. 26ರಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ವಿಶ್ವನಾಥ್ ಅವರು ಲಾಕ್‌ಡೌನ್‌ನಿಂದ ಊರಿಗೆ ಬಂದಿದ್ದು, ಹೆತ್ತವರಿಗೆ ಔಷಧ ಖರೀದಿಸಲು ಮೆಡಿಕಲ್‌ಗೆ ಬಂದಿದ್ದರು. ಈ ವೇಳೆ ಆತ ಮಾಸ್ಕ್ ಹಾಕದ ಕಾರಣ ಪೊಲೀಸರು ಅಡ್ಡಗಟ್ಟಿಲಾಠಿ ಬಿಸಿದ್ದರು. ಆತ ಪ್ರಶ್ನೆಗೆ ಉತ್ತರಿಸಿದರೂ ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧವಾಗಿ ಚರ್ಚೆಯಾಗಿ ಪ್ರಕರಣಕೆ ಜನರಿಗೆ ಕುತೂಹಲಕ್ಕೆ ಕಾರಣವಾಗಿತ್ತು.