ಕುಂದಾಪುರ, ಸೆ.15 ಕುಂದಾಪುರ ಚರ್ಚಿನ ಸಭಾಭವನದಲ್ಲಿ ಕುಂದಾಪುರ ಚರ್ಚಿನ ಆರೋಗ್ಯ ಆಯೋಗದ ಸಹಕಾರದಿಂದ ಮಧುಮೇಹದ ಬಗ್ಗೆ ಜಾಗ್ರತಿ ಕಾರ್ಯಕ್ರಮ ನಡೆಯಿತು.
ಮಧುಮೇಹದ ಬಗ್ಗೆ ಜಾಗ್ರತಿ ಕುರಿತು ತಿಳುವಳಿಕೆ ನೀಡಲು ಆಗಮಿಸಿದ್ದ ಕುಂದಾಪುರ ಮಂಜುನಾಥ ಅಸ್ಪತ್ರೆಯ ವೈದ್ಯಾಧಿಕಾರಿ ಡಾ। ಅಶೋಕ್ ರವರಿಗೆ ಪುಷ್ಪ ನೀಡಿ ಶುಭ ಕೊರೀದರು.
ಡಾ। ಅಶೋಕ್ ಅವರು ಮಧುಮೇಹದ ಬಗ್ಗೆ ಸವಿಸ್ತಾರವಾದ ತಿಳುವಳಿಕೆ ನೀಡಿದರು. ಮಧುಮೇಹ ೩೦ ವರ್ಷಗಳಲ್ಲಿ ಬಂದರೆ ಮಧುಮೇಹ 1, 40 ವರ್ಷದ ನಂತರ ಬಂದರೆ ಮಧುಮೇಹ ಎಂದು ವಿಂಗಡಿಸಲಾಗಿದೆ, ಮಧುಮೇಹಕ್ಕೆ ತುತ್ತಾದರೆ ಆಗುವ ತೊಂದರೆಗಳು, ದ್ರಷ್ಟಿ, ತೊಂದರೆ, ಕಿಡ್ಣಿ ತೊಂದರೆಗೆ ಒಳಗಾಗುವುದು, ಹಾಗೂ ಇನ್ನಿತರ ತೊಂದರೆಗಳ ಬಗ್ಗೆ ಅವರು ತಿಳಿಸಿದರು, ಮಧುಮೇಹ ಪರೀಕ್ಷಿಸುವ ರೀತಿ ಆಧುನಿಕ ವ್ಯವಸ್ಥೆಗಳ ಬಗ್ಗೆ, ಮಧುಮೇಹ ನಿಯಂತ್ರಣದಲ್ಲಿ ಇಡಲಿಕ್ಕೆ ಬೇಕಾದ ಆಹಾರ, ಆಹಾರ ಪದ್ದತಿ, ನಡಿಗೆ ಇದರ ಬಗ್ಗೆ ಕೂಲಂಕುಶವಾಗಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜನಸಾನ್ಯರು ಭಾಗವಹಿಸಿದ್ದರು. ಚರ್ಚಿನ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಧರ್ಮಭಗಿನಿಯರು ಉಪಸ್ಥಿತರಿದ್ದರು
ಕುಂದಾಪುರ ಚರ್ಚಿನ ಆರೋಗ್ಯ ಆಯೋಗದ ಸಂಚಾಲಕಿ, ಡಾ. ಸೋನಿ ಡಿಕೋಸ್ತಾ ಸ್ವಾಗತಿಸಿ ಧನ್ಯವಾದ ನೀಡಿದರು. ಆರೋಗ್ಯ ಆಯೋಗದ ಆಯೋಗದ ಸದಸ್ಯರು ಸಹಕರಿಸಿದರು.