ಕುಂದಾಪುರ, ಜು.31: ಈ ಸಾಲಿನ ಭಾರತೀಯ ಚಾರ್ಟೆಟ್ ಅಕೌಂಟೆಡ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುಂದಾಪುರ ಚರ್ಚ್ ಗಾಯನ ಪಂಗಡದ ಸದಸ್ಯರಾದ ವಿನಾರ್ಡ್ ಡಿಕೋಸ್ತಾ ಇವರನ್ನು ಜು.30 ರಂದು ಗಾಯನ ಮಂಡಳಿಯ ಪರವಾಗಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವೇದಿಕೆಯಲ್ಲಿದ್ದ ಅಥಿತಿಗಳ ಜೊತೆ ಫಲ, ಪುಷ್ಪ, ಹಾರ, ಶಾಲು ಹೊದಿಸಿ, ಪೇಟ ತೋಡಿಸಿ, ರೋಜರಿ ಮಾತೆಯ ಪ್ರತಿಮೆ ನೀಡಿ ಸನ್ಮಾನಿಸಿದರು
ಸನ್ಮಾನಿಸಿದ ಅವರು “ವಿನಾರ್ಡ್ ನಮ್ಮ ಕುಂದಾಪುರದ ಸುಪುತ್ರ, ಆತನು ಕಲಿಯಲು ಎಷ್ಟು ಚುರುಕೊ, ಅಷ್ಟೆ ದೈವ ಭಕ್ತಿಯಲ್ಲಿ ಮುಂದು, ಅವನಿಗೆ ಸಂತ ಜೋಸೆಫ್ ವಾಜ್ ಇವರಲ್ಲಿ ಬಹಳ ಭಕ್ತಿ ಚಾರ್ಟೆಡ್ ಅಕೌಂಟೆಡ್ ಪರೀಕ್ಷೆಗಾಗಿ ತಲ್ಲೀನರಾಗುವಾಗಲೂ, ನಮ್ಮ ರೋಜರಿ ಚರ್ಚಿನ ಗಾಯನ ಪಂಗಡದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚರ್ಚಿನ ಗಾಯನ ಪಂಗಡಕ್ಕೆ ತನ್ನ ಕಂಠದಿಂದ ಶ್ರೀಮಂತವಾಗಿಸಿದ್ದ ಈತ ಈಗ ಬಹು ಕಷ್ಟದ ಸಿ.ಎ. ಪರೀಕ್ಷೆ ತೆರ್ಗಡೆಯಾಗಿ ನಮಗೆ ಹೆಮ್ಮೆ ತಂದಿದ್ದಾನೆ, ಇದರಲ್ಲಿ ಅವರ ಹೆತ್ತವರ ಪಾಲೂ ಇದೆ” ಎಂದು ಅಭಿನಂದನಾ ಮಾತುಗಳನ್ನಾಡಿದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಮಾತನಾಡಿ “ವಿನಾರ್ಡ್ ಪ್ರತಿಭಾವಂತ ಯುವಕನಾಗಿದ್ದಾನೆ ಎಂದು ಇತರ ಧರ್ಮಗುರುಗಳಿಂದ ಕೇಳಲ್ಪಟ್ಟಿದ್ದೆ, ಆತ ವೈ.ಸಿ.ಎಸ್. ಕುಂದಾಪುರ ವಲಯದ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾಗಿ ಶ್ಲಾಘನೆ ಕೇಳಿದ್ದು, ನಮ್ಮ ಯುವ ಜನರಿಗೆ ಸ್ಪೂರ್ತಿಯಾಗಲು ಇತ್ತೀಚಿನ ಶಿಬಿರದಲ್ಲಿ ತಿಳುವಳಿಕೆ ಕೊಡಲು ನಾನು ಆತನನ್ನು ಆರಿಸಿದ್ದು ಫಲಫ್ರಬವೆಂಬತ್ತೆ ಇವತ್ತು ಸಿ.ಎ. ಯಾಗಿ ಮಾರ್ಪಟ್ಟಿದ್ದಾನೆ, ನಮ್ಮ ಯುವ ಯುವತಿಯರು ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಉನ್ನತ ಮಟ್ಟದ ಪದವಿ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಮ್ಮಾನ ಸ್ವೀಕರಿಸಿದ ವಿನಾರ್ಡ್ ಡಿಕೋಸ್ತಾ ಮಾತನಾಡಿ ‘ಎಲ್ಲರೂ ಇಂಜಿನಿಯರಿಂಗ್, ವೈಧ್ಯಕೀಯ ಕ್ಷೇತ್ರಗಳನ್ನು ಆರಿಸಿಕೊಳ್ಳುತ್ತಾರೆ, ಆದರೆ ನಾನು ಇತರ ಕ್ಷೇತ್ರಗಳನ್ನು ಪರೀಶಿಲಿಸಿ ವಾಣಿಜ್ಯವನ್ನು ಆರಿಸಿಕೊಂಡು ಸಿ.ಎ. ಆಗಲು ಮುಂದಡಿ ಇಟ್ಟೆ. ಸಿ.ಎ. ಪರೀಕ್ಷೆ ತೆರ್ಗಡೆಯಾಗಲು, ಕಠಿಣ ಪರಿಶ್ರಮದ ಅಗತ್ಯವಿದೆ, ನಾನು ಸಿ.ಎ. ತೆರ್ಗಡೆಯಾಗುಲು ನನ್ನ ಮಾತಾ ಪಿತ ನನ್ನ ಕುಟುಂಬದ ಪ್ರೇರಣೆ ಪೆÇ್ರೀತ್ಸಾಹ ತಂಬಾ ಇದೆ, ಜೊತೆಗೆ ನಾನು ನಂಬಿದ ರೋಜರಿ ಮಾತೆ ಮತ್ತು ಸಂತ ಜೋಸೆಫ್ ವಾಜ್ ಇವರ ದಯೆ ಕೂಡ ಆಗಿದೆಯೆಂದು ನಂಬುತ್ತೇನೆ’ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕುಂದಾಪುರ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಗಾಯನ ಮಂಡಳಿ ಸದಸ್ಯ ಜೆರಾಲ್ಡ್ ಕ್ರಾಸ್ತಾ, ಕುಂದಾಪುರ ಚರ್ಚಿನ ಸಮಾಜ ಸಂಪರ್ಕ ಮಾಧ್ಯಮದ ಸಂಚಾಲಕರಾದ ವಿನಾರ್ಡ್ ಇವರ ತಂದೆ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಈ ಸಂದರ್ಭದಲ್ಲಿ ಮಾತನಾಡಿದರು. ಗಾಯನ ಮಂಡಳಿ ಅಧ್ಯಕ್ಷೆಯಾದ ವಿನಾರ್ಡ್ ಇವರ ತಾಯಿ ವಿನಯಾ ಡಿಕೋಸ್ತಾ, ಚರ್ಚ್ ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗಾಯನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಫೆಲ್ಸಿಯಾನ ಡಿಸೋಜಾ ಸ್ವಾಗತಿಸಿದರು. ಆಲ್ಡ್ರಿನ್ ಡಿಸೋಜಾ ನಿರೂಪಿಸಿ, ಗಾಯನ ಮಂಡಳಿಯ ಕಾರ್ಯದರ್ಶಿ ರೀಮಾ ಡಿಆಲ್ಮೇಡಾ ವಂದಿಸಿದರು.