ಕುಂದಾಪುರ, ನ.18: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ (ರಿ) ಮತ್ತು ಶೆವೊಟ್ ಪ್ರತಿಷ್ಟಾನ್ (ರಿ)ಇವರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ.18 ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಫಾ|ಪಾವ್ಲ್ ರೇಗೊ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು
ಈ ಸಂದರ್ಭಲ್ಲಿ “ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯು ಉತ್ತಮ ಕಾರ್ಯಗಳನ್ನು ಮಾಡುತ್ತದೆ ಎಂದು ಬಿಶಪ್ ಸ್ವಾಮಿಯರು ಕೂಡ ಹೇಳುತ್ತಾರೆ, ಹಾಗೇಯೆ ನೀವು ಸಮಾಜಕ್ಕೆ ಒಳಿತಾಗುವ ಯೋಜನೆಗಳನ್ನು ಹಮ್ಮಿಕೊಳ್ಳುತಿದ್ದಿರಿ. ಇಂದು ನೀವು ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಮಾಡುತಿದ್ದಿರಿ, , ಭಾಷಣ ವಿಜೇತರನ್ನು ಬಹುಮಾನ ಕೊಡುತ್ತಿರಿ ಮುಂದಿನ ದಿನಗಳಲ್ಲಿ ಎಲ್ಲಾ ಚಿಕ್ಕ ಮಕ್ಕಳು ಭಾಷಣದಲ್ಲಿ ಮುಂದೆ ಬಂದು ಒಂದರೇಡು ಶಬ್ದ ಮಾತನಾಡಿದರೆ ಸಾಕು. ಮುಂದೆ ಆತ ಒಳ್ಳೆಯ ಮಾತುಗಾರನಾಗುತ್ತಾನೆ, ಜೊತೆಗೆ ಸಮಾಜದ ಮುಖಂಡರನ್ನು ಸನ್ಮಾನಿಸುತ್ತಿರಿ ಅವರಿಗೆ ಅಭಿನಂದನೆ ಸಲ್ಲಿಸುತ್ತಾ, ಇಂದಿನ ಮಕ್ಕಳು ಮುಂದಿನ ನಾಯಕರಾಗಿ ಪ್ರಜ್ವಲಿಸಬೇಕು ಎಂದು ಸಂದೇಶ ನೀಡಿದ ಅವರು ಅತಿಥಿಗಳ ಜೊತೆ ಕುಂದಾಪುರ ವಲಯದ ಎಲ್ಲಾ ಘಟಕಗಳ ವಿದ್ಯಾಬಾಸದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಬಹುಮಾನ ಧ್ರಡಪತ್ರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಆಯ್ಕೆಯಾದ ಕುಂದಾಪುರ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕ್ರಾಸ್ಟೊರವರನ್ನು ಸಮಿತಿ ಸನ್ಮಾನಿಸಿತು. ‘ಅದಕ್ಕೆ ಉತ್ತರವಾಗಿ ನನ್ನ ಆಯ್ಕೆಯ ಪ್ರಕ್ರಿಯೆಯಲ್ಲಿ ಕಥೊಲಿಕ್ ಸಭಾದ ಪಾತ್ರವಿದೆ, ರಾಜಕೀಯ ಮುಖಂಡರ ಪಾತ್ರವಿದೆ, ನಮ್ಮ ಮಕ್ಕಳು ಪ್ರತಿಭಾಶಾಲಿಗಳಾಗಬೇಕಾದರೆ, ಮನೆಯಲ್ಲಿ ಅಂತಹ ವಾತವರಣ ಸ್ರಷ್ಟಿ ಮಾಡಬೇಕಾಗುತ್ತದೆ. ಅಲ್ಲಿ ಕಲಿಯುವ ವಾತವರಣ ಇರಬೇಕು, ಟಿ.ವಿ. ಮೊಬಾಯ್ಲ್ ದೂರವಿದ್ದು ಸಮರ್ಪಕವಾದ ಅವಶ್ಯಕತೆ ಕಲ್ಪಿಸಬೇಕು, ಮಕ್ಕಳು ಕೂಡ ಅದಕ್ಕೆ ಸಹಾಕರ ನೀಡಿ ಪ್ರತಿಭಾಶಾಲಿಗಳಾಗಿ ಬೆಳೆಯ ಬೇಕು’ ಎನ್ನುತ್ತಾ ಅವರು ಶೆವೊಟ್ ಪ್ರತಿಷ್ಟಾನ್ (ರಿ) ಅವರಿಂದ ಅಸಕ್ತರಿಗೆ ಕೊಡಮಾಡುವ ಧನಸಹಾಯವನ್ನು ಸಂಸ್ಥೆಯ ಅಧ್ಯಕ್ಷ ವಿನೋದ್ ಕ್ರಾಸ್ಟೊ ವಿತರಿಸಿದರು, ಹಾಗೇಯೆ ವಿಕ್ರಮ್ ಸುನೀತಾ ಹೆಸರಿನಲ್ಲಿ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ಅವರು ವಿತರಿಸಿದರು.
ಇನ್ನೊರ್ವ ಸನ್ಮಾನಿತರಾದ ಸಮಾಜದ ಮುಖಂಡ ವರ್ಕರ್ಸ್ ಇಂಡಿಯಾ ಫೆಡರೇಶನ್ ಕರ್ನಾಟಕ ಇದರ ಅಧ್ಯಕ್ಷರಾದ ಎಲ್ರೊಯ್ ಕಿರಣ್ ಕ್ರಾಸ್ಟೊ ಮಾತನಾಡಿ “ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ತನ್ನದೇ ಆದ ಛಾಪು ಇದೆ, ಸಮಾಜಕ್ಕೆ ಪ್ರಯೋಜನವಾಗುವ ಕೆಲಸ ಮಾಡುತ್ತಾ ಇರುತ್ತದೆ, ನಮ್ಮ ಹಿಂದಿನ ಮತ್ತು ಇಂದಿನ ನಾಯಕರು, ಇತರರಿಗೆ ಮಾದರಿಯಾಗುವ ಯೋಜನೆಗಳನ್ನು ನೇರವೆರಿಸಿದ್ದಾರೆ, ಮುಂದಿನ ದಿನಗಳಲ್ಲಿ ಈ ಜವಾಬ್ದಾರಿಗಳನ್ನು ಇಂದಿನ ವಿದ್ಯಾಥಿಗಳು ವಹಿಸಿಕೊಳ್ಳಬೇಕು’ ಸನ್ಮಾನಿತರಾದ ಇನ್ನೋರ್ವ ನಾಯಕಿ ಮಂಗಳೂರು ವಿಶ್ವವಿದುಆನಿಲಯದ ಸಿಂಡಿಕೇಟ್ ಸದ್ಯಸೆ ಜೂಡಿತ್ ಮೆಂಡೊನ್ಸಾ “ ಇಂದಿನ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಇವೆ, ಬೆಳ್ಳಿಗೆಯ ಉಪಆಹಾರ ತಡಮಾಡಿ ಮಾಡುವುದು, ತಡಮಾಡಿ ನಿದ್ರಿಸುವುದು ತಡಮಾಡಿ ಏಳುವುದು ಸಮರ್ಪಕ ನೀರು ಕುಡಿಯದೆ ಇರುವುದು, ಜಂಕ್ ಪುಡ್ಸ್ ತಿನ್ನುವುದು, ಒತ್ತಡಕ್ಕೆ ಒಳಗಾಗುವುದು, ಇದನ್ನು ತಪ್ಪಿಸಬೇಕು ಎನ್ನುತ್ತಾ ಕಥೊ ಕ್ ಸಭಾ ಮಾಡು ಕಾರ್ಯವಿಧಾನಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಸಕ್ತ ಮತ್ತು ಹಾಲಿ ವಲಯ ಮತ್ತು ಘಟಕ ಅಧ್ಯಕ್ಷರಿಗೆ,ಕಾರ್ಯದರ್ಶಿಗಳಿಗೆ ಗೌರವಿಸಲಾಯಿತು.ಈ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷೆ ಮೇಬಲ್ ಡಿಸೋಜಾ ನೆಡೆಸಿಕೊಟ್ಟರು. ಪಡುಕೋಣೆ ಘಟಕದ ಬಿಡಿಎಸ್ ಡಾ।ಪದವಿ ಪಡೆದ ಡಾ। ಏಶ್ಲಿ ಅಂಟೋನಿ ಡಿಸಿಲ್ವಾ ಮತ್ತು ಕಥೊಲಿಕ್ ಸಭೆಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಜನನುಡಿ ಡಾಟ್ ಕೋಮ್ ಸ್ಥಾಪಕರಾದ ಬರ್ನಾಡ್ ಡಿಕೋಸ್ತಾರವರನ್ನು ಸನ್ಮಾನಿಸಲಾಯಿತು. ಫಿಲೋಮಿನಾ ಡಿಸೋಜಾ, ಅನಿಲ್ ಡಿಸಿಲ್ವಾ, ಜೂಲಿಯೆಟ್ ಪಾಯ್ಸ್ ಸನ್ಮಾನಿತರ ಪರಿಚಯವನ್ನು ನೀಡಿದರು.
ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ‘ಕಥೊಲಿಕ್ ಸಭಾ ಸಮಾಜಕ್ಕೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಮಾಡುತ್ತಾ ಇದೆ, ಇಂದು ನಾವು ಯಾರಿಗೆ ಪ್ರತಿಭಾಶಾಲಿಗಳನ್ನು ಗೌರವಿಸುತ್ತೇವೆಯೊ ಅವರು ಮುದೆ ನಿಮ್ಮ ಜೀವನ ರೂಪಿಸಿಕೊಂಡ ಮೇಲೆ ಮುಂದೆ ನಿಮ್ಮಂತಹ ಪ್ರತಿಭಾ ಶಾಲಿಗಳಿಗೆ ಗೌರವಿಸಲು ನಿಮ್ಮ ಕಾಣಿಕೆ ಬೇಕಾಗುತ್ತದೆ, ಅದಕ್ಕೆ ನೀವು ಹಿಂದೆ ಸರಿಯಬಾರದು, ಎಂದು ಸಂದೇಶ ನೀಡಿ ಸ್ವಾಗತಿಸಿದರು.
ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ನಿಕಟಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ ಉಪಸ್ಥಿತರಿದ್ದರು, ಖಜಾಂಚಿ ಶೈಲಾ ಡಿಆಲ್ಮೇಡಾ ವಿಜೇತರ ಹೆಸರುಗಳನ್ನು ವಾಚಿಸಿದರು, ಪದಾಧಿಕಾರಿ ಪ್ರೇಮಾ ಡಿಕುನ್ನಾ ಕಾರ್ಯಕ್ರಮ ನಿರೂಪಿಸಿದರು, ಕಥೊಲಿಕ್ ಸಭಾ ಕಾರ್ಯದರ್ಶಿ ಗ್ರೆವೀನ್ ಪಸನ್ನಾ ವಂದಿಸಿದರು.