ಕುಂದಾಪುರ, ಮಾ.26: ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿ (ರಿ) ಮತ್ತು ಶೆವೊಟ್ ಪ್ರತಿಷ್ಟಾನ್ (ರಿ)ಇವರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮಾ.25 ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಪ್ರಧಾನ ಧರ್ಮಗುರು, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಫಾ|ಸ್ಟ್ಯಾನಿ ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳಿಗೆ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂದು ಗೌರವಿಸಿದರೆ, ಅವರಿಗೆ ಅದೊಂದು ಉತ್ತಮ ಪ್ರೇರಣೆ ದೊರಕುತ್ತದೆ, ಅವರು ಮುಂದಿನ ವರ್ಷವೂ ತಮಗೆ ಈ ಪುರಸ್ಕಾರ ದೊರಕಬೇಕೆಂದು ಪ್ರಯತ್ನ ಪಡುತ್ತಾರೆ ಮತ್ತು ಹಾಗೇ ಅವರ ಪ್ರಯತ್ನ ಸುಫಲವಾದರೆ, ಅವರು ಬಹಳ ಸಂತೋಷಗೊಳ್ಳುತ್ತಾರೆ, ಈ ರೀತಿ ನಡೆದಾಗ ಗೌರವಿಸಲ್ಪಟ್ಟ ಸಂಸ್ಥೆಯ ಕಾರ್ಯಕ್ರಮ ಯಶ್ವಸಿಯಾದ ಫಲ ಸಂತ್ರಪ್ತಿ ದೊರಕುತ್ತದೆ, ನಮ್ಮ ಕಥೊಲಿಕ್ ಸಭಾ ಸಂಘಟನೆಯು ಈ ಥರಹಾ ಒಳ್ಳೆಯ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತಾರೆ, ಹಾಗಾಗಿ ಅವರಿಗೆ ಮತ್ತು ಇಂದು ಗೌರವ ಪಡೆದುಕೊಂಡವರಿಗೆಲ್ಲಾ ಅಭಿನಂದಗಳು’ ಎಂದು ಅವರ ಸಂದೇಶದಲ್ಲಿ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಆಗಮಿಸಿದ ಕುಂದಾಪುರ ಸರಕಾರಿ ಆಸ್ಪತ್ರೆಯ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕ ಡಾ.ರಾಬರ್ಟ್ ರೆಬೆಲ್ಲೊ ಪ್ರತಿಭಾವಂತರಿಗೆ ಗೌರವಿಸಿ “ಇಂತಹ ಒಂದು ಪ್ರತಿಭಾವಂತರಿಗೆ ಗೌರವಿಸುವ ಉತ್ತಮ ಕಾರ್ಯಕ್ರಮ. ಇದನ್ನು ನಡೆಸಿಕೊಂಡು ಹೋಗುತ್ತಿರುವ ಕಥೊಲಿಕ್ ಸಭಾದವರಿಗೆ ಅಭಿನಂದನೆಗಳನ್ನು ಸಲ್ಲಿಸುತೇನೆ, ನಮ್ಮ ಸಮಾಜದ ತರುಣರು ವಿಧ್ಯಾಬಾಸವನ್ನು ಮೊಟಕುಗೊಳಿಸದೆ, ಹೆಚ್ಚಿನ ವಿಧ್ಯಾವಾಸವನ್ನು ಪಡೆದುಕೊಳ್ಳಬೇಕು, ಕನಿಷ್ಟ ಯಾವುದಾದರು ಒಂದು ಪದವಿಯನ್ನು ಗಳಿಸಬೇಕು, ಸಾಧ್ಯವಾದರೆ ಹೆಚ್ಚಿನ ವಿಧ್ಯಾಬಾಸವನ್ನು ಗಳಿಸಬೇಕು, ಮನಸು ಮಾಡಿದರೆ ದೊಡ್ಡ ಮಟ್ಟದ ಪದವಿಗಳನ್ನು ಬಡವರು ಪಡೆದುಕೊಳ್ಳಬಹುದು, ಅದಕ್ಕಾಗಿ ನಮ್ಮ ಸರಕಾರಗಳಿಂದ ಯೋಜನೆಗಳಿವೆ, ಅದನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೆವೊಟ್ ಪ್ರತಿಷ್ಟಾನ್ (ರಿ) ಅವರಿಂದ ಅಸಕ್ತರಿಗೆ ಕೊಡಮಾಡುವ ಧನಸಹಾಯವನ್ನು ಸಂಸ್ಥೆಯ ಅಧ್ಯಕ್ಷ ವಿನೋದ್ ಕ್ರಾಸ್ಟೊ ವಿತರಿಸಿದರು, ಹಾಗೇಯೆ ವಿಕ್ರಮ್ ಸುನೀತಾ ಹೆಸರಿನಲ್ಲಿ ಕೊಡಮಾಡುವ ವಿದ್ಯಾರ್ಥಿ ವೇತನವನ್ನು ಅವರು ವಿತರಿಸಿ “ಕಥೊಲಿಕ್ ಸಭಾ ಮಾಡು ಕಾರ್ಯವಿಧಾನಗಳನ್ನು ವಿವರಿಸಿ, ಕಥೊಲಿಕ್ ಸಭಾ ನಮ್ಮ ಸಮಾಜದಲ್ಲಿ ಜಾಗ್ರತಿ ಮೂಡಿಸುವ, ಸಮಾಜಕ್ಕೆ ಒಳಿತನ್ನುಂಟು ಮಾಡಲು ಹಲವಾರು ರೀತಿಯಲ್ಲಿ ಶ್ರಮಿಸುತ್ತದೆ’ ಎಂದು ತಿಳಿಸಿದರು.
ವ.ಕಥೊಲಿಕ್ ಸಭಾದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷ್ತೆಯನ್ನು ವಹಿಸಿಕೊಂಡ ವಿಲ್ಸನ್ ಡಿಆಲ್ಮೇಡಾ ‘ವಿದ್ಯಾರ್ಥಿಗಳು ಸರಕಾರದಿಂದ ಸಿಗುವ ವಿಧ್ಯಾರ್ಥಿ ವೇತನ ಇನ್ನಿತರ ಸವಲತ್ತುಗಳು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಕನ್ನಡ ಕೊಂಕಣಿ ಭಾಷಣ ಸ್ಪರ್ಧೆಗಳಲ್ಲಿ ವೀಜೆತರಾದವರಿಗೆ, ಕಲಿಕೆಯಲ್ಲಿ ವಲಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ, ಸಿ.ಎ. ಮಾಡಿದ ಸಿ.ಎ ವಿನಾರ್ಡ್ ಡಿಕೋಸ್ತಾ, ವೈದ್ಯ ವ್ರತ್ತಿ ಉತಿರ್ಣೆಯಾದ ಡಾ.ನಿಶಾಲ್ ಡಿಸೋಜಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಯ ನಿಕಟಪೂರ್ವ ಅಧ್ಯಕ್ಷೆ ಶಾಂತಿ ಪಿರೇರಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ರೋಶನ್ ಲೋಬೊ ಸ್ವಾಗತಿಸಿದರು. ಖಜಾಂಚಿ ಶೈಲಾ ಡಿಆಲ್ಮೇಡಾ ವಿಜೇತರ ಹೆಸರುಗಳನ್ನು ವಾಚಿಸಿದರು, ಪದಾಧಿಕಾರಿ ವಿನಯ್ ಡಿಆಲ್ಮೇಡಾ ಅತಿಥಿಗಳ, ಪದಾಧಿಕಾರಿ ಪ್ರೇಮಾ ಡಿಕುನ್ನಾ ಮತ್ತು ಅಲೆಕ್ಸಾಂಡರ್ ಲುವಿಸ್ ಸನ್ಮಾನಿತರ ಪರಿಚಯನ್ನು ನೀಡಿದರು. ಕಥೊಲಿಕ್ ಸಭಾ ಕಾರ್ಯದರ್ಶಿ ಗ್ರೆವೀನ್ ಪಸನ್ನಾ ವಂದಿಸಿದರು.