ಕುಂದಾಪುರ, ಅ.18: ಕುಂದಾಪುರ ವಲಯದ ಆರೋಗ್ಯ ಆಯೋಗದ ವತಿಯಿಂದ ಸಂತ ಮೇರಿಸ್ ಪಿ.ಯು. ಕಾಲೇಜಿನ ಸಭಾ ಭವನದಲ್ಲಿ ಕುಂದಾಪುರ ವಲಯ ಮಟ್ಟದಲ್ಲಿ ಆರೋಗ್ಯ ವ್ರತ್ತಿ ಪರರ ಸಹಮಿಲನ ನಎಡೆಯಿತು. ಈ ಸಹಮಿಲನದಲ್ಲಿ ವೈದ್ಯರು, ದಾದಿಗಳು,ಅರೆವೈದ್ಯ ಸಿಬಂದಿ ಮತ್ತು ಆರೋಗ್ಯ, ಓಷಧಿ ತಯಾರಕರ ಪ್ರತಿನಿಧಿಗಳು ಮತ್ತು ಆರೋಗ್ಯ ಪರಿಚಾರಕರನೊಳಗೊಂಡವರ ಸಹಮಿಲನವನ್ನು ವಲಯದ ಆರೋಗ್ಯ ಆಯೋಗದ ನಿರ್ದೇಶಕರಾದ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ‘ಈ ಕ್ಷೇತ್ರ ಬಹು ಅಮೂಲ್ಯವಾದುದು, ಉತ್ತಮ ವೈದ್ಯರು ದಾದಿಗಳು ಆದರೆ ಮಾತ್ರ ಪ್ರಯೋಜನವಿಲ್ಲ, ಸ್ವಭಾವದಲ್ಲಿ ಕೂಡ ಉತ್ತಮರಾಗಿರಬೇಕು, ಆಗ ಮಾತ್ರ ರೋಗಿಗಳಿಗೆ ಒಳ್ಳೆದಾಗುತ್ತೆ. ಒಳ್ಳೆಯ ವೈದ್ಯರೆಂದರೆ ಜನ ಮೆಚ್ಚುಗೆ ಪಡೆದು ರೋಗಿಗಳು ಆಸ್ಪತ್ರೆಗೆ ಬರಲು ಸಂತೋಷ ಪಡುತ್ತಾರೆ, ಸ್ವಭಾ ಕೆಟ್ಟದಾದರೆ ಆಸ್ಪತ್ರೆಗಳಿಗೆ ಕೆಟ್ಟ ಹೆಸರು ಬರುತ್ತೆ, ಇದೆಲ್ಲಾ ಆರೋಗ್ಯ ಸಹ ಉದ್ಯೋಗಿಗಳಿಗೂ ಅನ್ವಯಿಸುತ್ತೆ. ಅದೇ ರೀತಿ ನಾವು ಪಡೆದಿಕೊಂಡ ಜ್ನಾನದಿಂದ ಇತರರಿಗೆ ಉಪಯೋಗಕ್ಕೆ ಬಳಸಿದರೆ ಮಾತ್ರ ಸಾರ್ಥಕವಾಗುತ್ತೆ’ ಎಂದು ಸಂದೇಶ್ ನೀಡಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಸಹಮಿನ ಮತ್ತು ಶಿಬಿರಕ್ಕೆ ಶುಭ ಕೋರಿದರು.
ಸಂಪನ್ಮೂಲ ವ್ಯೆಕ್ತಿಗಳಾದ ಡಾ|ಲೆಸ್ಲಿ ಲುವಿಸ್ ಮತ್ತು ಡಾ|ಜೀವನ್ ಲುವಿಸ್ ಆಗಮಿಸಿ ಶಿಬಿರವನ್ನು ನೆಡೆಸಿಕೊಟ್ಟರು. ಇವರ ಪರಿಚಯವನ್ನು ಡಾ|ವಿಕ್ಟರ್ ಡಿಕೋಸ್ತಾ ಮತ್ತು ಡಾ|ಗ್ರೆಟ್ಟಾ ಡಿಕೋಸ್ತಾ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ನಿರ್ದೇಶಕ ಡಾ|ಎಡ್ವರ್ಡ್ ಲೋಬೊ ಸ್ವಾಗತಿಸಿದರು. ಪಿಯುಸ್ ನಗರ ಚರ್ಚಿನ ಆರೋಗ್ಯ ಆಯೋಗದ ಸಂಚಾಲಕಿ ರೇಶ್ಮಾ ಡಿಸೋಜಾ ವಂದಿಸಿದರು. ಕುಂದಾಪುರ ಚರ್ಚಿನ ಆರೋಗ್ಯ ಆಯೋಗದ ಸಂಯೋಜಕಿ ಡಾ|ಸೋನಿ ಡಿಕೋಸ್ತಾ ನಿರೂಪಿಸಿದರು.