ಕುಂದಾಪುರ, ನ.:12 ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಠ್ಯದ ಜೊತೆಗೆ ವ್ಯವಹಾರ ಜ್ಞಾನ ಅಗತ್ಯವಿದೆ, ಅದಕ್ಕೆ ನೆರವಾಗುವ ಉದ್ದೇಶದಿಂದ ಕುಂದಾಪುರ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಂಘಟಿಸಿದ ವ್ಯವಹಾರ ದಿನ (Buissiness day) ವ್ಯಾಪರ ಮೇಳದಲ್ಲಿ ಕುಂದಾಪುರ ಪ್ರತಿಷ್ಟಿತ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ, ಲಿನೇಟ್, ರಕ್ಷಿತಾ, ದೀಪಿಕಾ ಪೈ, ಮಂಜುನಾಥ, ಭಾಗವಹಿಸಿ ವಿದ್ಯೆಯ ಜತೆಗೆ ವ್ಯವಹಾರ ಜ್ಞಾನ ವೃದ್ಧಿಸಿಕೊಂಡು ಹೆಮ್ಮೆಗೆ ಪಾತ್ರರಾಗಿದ್ದಾರೆ.
ವ್ಯಾಪರ ಮೇಳದ ಮಳಿಗೆಯಲ್ಲಿ ಜೋನಿ ಬೆಲ್ಲ, ತೆಂಗಿನ ಎಣ್ಣೆ, ಹಪ್ಪಳ, ಪಿಸ್ತಾ, ಖರ್ಜೂರ, ಗೋಡಂಬಿ ಮತ್ತು ಮಕ್ಕಳು ತಿನ್ನುವ ವಿವಿಧ ವಸ್ತುಗಳು ಸೇರಿದಂತೆ ಬಗೆಬಗೆಯ ಪದಾರ್ಥಗಳನ್ನು ಮಾರಾಟ ಮಾಡಿ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು 5515 ರೂಪಾಯಿಯನ್ನು ಸಂಗ್ರಹಿಸಿದರು. ಮೇಳದಲ್ಲಿ ಸೇರಿದ ವಿದ್ಯಾರ್ಥಿಗಳು,ಅವರ ಪೋಷಕರು ಅವುಗಳನ್ನು ಖರೀದಿಸಿ ರುಚಿ ಸವಿದರು. ವಿದ್ಯಾರ್ಥಿಗಳು ಒಂದಷ್ಟು ಖುಷಿ ಪಟ್ಟರು.
“ಇಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅದರಲ್ಲೂ ಇತರರೊಂದಿಗೆ ಸ್ಪರ್ಧೆಗಿಳಿದು ಮಾರಾಟ ಮಾಡುವುದು ನಿಜಕ್ಕೂ ಕಷ್ಟಕರ. ಆದರೆ ಈ ವ್ಯವಹಾರ ದಿನ (ವ್ಯಾಪರ ಮೇಳ) ಉತ್ತಮ ಅನುಭವವನ್ನು ನೀಡಿದೆ” ಎನ್ನುತ್ತಾಳೆ ಸಂತ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ವಿಜಯಲಕ್ಷಿ..