

ಕುಂದಾಪುರ : ಬಿಜೆಪಿಯ ನಿರಂತರ ಸುಳ್ಳು ಅಪಾದನೆಗಳಿಂದ ಜನಪರ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸುವುದು ಅಸಾಧ್ಯ ವಿಧಾನಪರಿಷತ್ತಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಧ್ವನಿ ಆಗಬಲ್ಲ ರಾಜು ಪೂಜಾರಿ ಅವರನ್ನು ಬೆಂಬಲಿಸಿದರೆ ,ಕರಾವಳಿಯ ಸ್ಥಳೀಯ ಆಡಳಿತಕ್ಕೆ ಶಕ್ತಿ ಬಂದಂತಾಗುತ್ತದೆ ,ಮಾತ್ರವಲ್ಲದೆ ಸಿದ್ದರಾಮಯ್ಯನವರ ಕೈ ಬಲಪಡಿಸಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹೇಳಿದರು.
ಇಂದು ಕೋಟೇಶ್ವರ ಸಹನಾ ಹೋಟೆಲ್ ನಾ ಸುಮುಖ ಹಾಲಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕುಂದಾಪುರ ಕಾಂಗ್ರೆಸ್ ಉಸ್ತುವಾರಿಗಳನ್ನು ಉದ್ದೇಶಿಸಿ ಇವರು ಮಾತನಾಡಿದರು.
ಪ್ರತಿಯೊಂದು ಮನೆಗೆ ಆರ್ಥಿಕ ಶಕ್ತಿಯನ್ನು ನೀಡಿದ ಕಾಂಗ್ರೆಸ್ ಆಡಳಿತದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆಯವರು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ವಹಿಸಿದ್ದರು.
ವೇದಿಕೆಯಲ್ಲಿ ಅಭ್ಯರ್ಥಿ ರಾಜು ಪೂಜಾರಿ , ಕಿಶನ್ ಹೆಗ್ಡೆ , ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ ,ಬಿ ಹೇರಿಯಣ್ಣ, ದೇವಕಿ ಸಣ್ಣಯ್ಯ , ವಾಸುದೇವ್ ಯಡಿಯಾಳ, ಅಶೋಕ ಪೂಜಾರಿ, ಶ್ರೀನಿವಾಸ್ ಅಮೀನ್ ಸಾಲಿಗ್ರಾಮ , ವಿಕಾಸ್ ಹೆಗ್ಡೆ, ರೋಶನ್ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು .
ಕುಂದಾಪುರ ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕೃಷ್ಣ ಪೂಜಾರಿ ವಂದಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.

