

ಕುಂದಾಪುರ: ಮೂಲತಹ ಕುಂದಾಪುರದವರಾದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿ ನೂತನವಾಗಿ ಆರಿಸಲ್ಪಟ್ಟ ಅ|ವಂ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಅಧಿಕ್ರತವಾಗಿ, ಅವರ ಮಾತ್ರ ಇಗರ್ಜಿಯಾದ ಹೋಲಿ ರೋಜರಿ ಚರ್ಚಿಗೆ ಭೇಟಿ ನೀಡಿ “ದೈವಿಕ ಕ್ರಪೆ” ಯ ಹಬ್ಬದ ಬಲಿದಾನವನ್ನು ಅರ್ಪಿಸಿ, ‘ದೈವಿಕ ಕ್ರಪೆ’ ಯ ಬಗ್ಗೆ ಸಂದೇಶ ನೀಡಿ, ದೇವರು ಮಹಾ ಕ್ಷಮಾ ಭರಿತರು, ಅವರು ಎಲ್ಲಾ ಪಾಪಿಗಳನ್ನು ಕ್ಷಮಿಸುತ್ತಾರೆ, ಹಾಗೇ ನಾವೂ ಕೂಡ ನಮ್ಮಗೆ ಅನ್ಯಾಯ, ಕಷ್ಟ, ಹಿಂಸೆ, ತೊಂದರೆ ಕೊಟ್ಟವರಿಗೆ ಕ್ಷಮೆ ನೀಡಬೇಕು’ ಎಂದು ಸಂದೇಶ ನೀಡಿದರು.
ಧರ್ಮಪ್ರಾಂತ್ಯಕ್ಕೆ ಬಿಷಪ್‍ರವರು ಪ್ರಧಾನರಾದರೆ, ಮೊನ್ಸಿಜೆಂರ್ ವಿಕಾರ್ ಜನರಲ್‍ರವರು ಎರಡನೇ ಸ್ಥಾನದಲ್ಲಿರುತ್ತಾರೆ. ಅಂತಹಾ ಮಹತ್ವದ ಹುದ್ದೆಯನ್ನು ನಮ್ಮ ರೋಜರಿ ಮಾತಾ ಚರ್ಚಿನವರೇ ಆದ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಪಡೆದುಕೊಂಡಿದ್ದಾರೆ. ಇದು ನಮಗೆ ಹೆಮ್ಮೆ ಮತ್ತು ಗೌರವ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಕುಂದಾಪುರ ಚರ್ಚಿನವರೇ ಆದ ಪ್ರಸ್ತೂತ ಇಟೆಲಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ವಂ|ಫಾ|ಮನೋಜ್ ಬ್ರಗಾಂಜಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇವರೊಂದಿಗೆ, ಚರ್ಚಿನ ಪರವಾಗಿ ಮೊನ್ಸಿಜೆಂರ್ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್‍ರನ್ನು ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರವಾಗಿ ನಾನು ರೋಜರಿ ಮಾತೆಯ ಭಕ್ತ, ಅವಳಿಂದ ನನಗೆಲ್ಲ ಇದು ದೊರಕಿದೆ, ಇದೊಂದು ಸೇವೆ ನೀಡಲು ಸಿಕ್ಕಿದ ಭಾಗ್ಯವೆಂದು ತಿಳಿದು ಸೇವೆ ಮಾಡುತ್ತೇನೆ, ಇದಕ್ಕೆ ನಿಮ್ಮ ಪ್ರಾಥನೇಯ ಬಲ ಬೇಕಾಗಿದೆ ಎಂದು ಹೇಳಿ. ಮುಂದಿನ ತಿಂಗಳು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊರವರ ಗುರುದೀಕ್ಷೆಯ ಸುವರ್ಣಮಹೋತ್ಸವ (50 ವರ್ಷಗಳ ಆಚರಣೆ) ಮತ್ತು ಅವರ ಹುಟ್ಟು ಹಬ್ಬದ ಅಮ್ರತೋತ್ಸವ (75 ನೇ ವರ್ಷದ ಹುಟ್ಟು ಹಬ್ಬದ ಆಚರಣೆ) ಇದೆ, ಇದು ನನ್ನ ಮಾತ್ರ ಇಗರ್ಜಿ ನನಗೆ ಈ ಉತ್ಸವಕ್ಕೆ ಬರಬೇಕೆಂದು ಬಹಳ ಆಶೆ ಇತ್ತು, ಆದರೆ, ಅಂದೇ ನಮ್ಮ ಧರ್ಮಪ್ರಾಂತ್ಯದಲ್ಲಿ ಮತ್ತೊಂದು ಉತ್ಸವ ಇದೆ, ಇಲ್ಲಿ ಹಿರಿಯ ಧರ್ಮಗುರುಗಳ ಉತ್ಸವ, ಜೊತೆ ಹಿರಿಯ ಇಗರ್ಜಿ ಆದರಿಂದ ಬಿಷಪ್ ಸ್ವಾಮಿಯವರು ಇಲ್ಲಿ ಆಗಮಿಸುತ್ತಾರೆ, ಮತ್ತೊಂದು ಉತ್ಸವಕ್ಕೆ ನಾನು ಹೋಗಬೇಕಾಗಿದೆ, ಹೀಗೆ ಕಾರ್ಯಕ್ರಮ ಹಂಚಿಕೊಂಡಿದ್ದರಿಂದ ಇಲ್ಲಿನ ಉತ್ಸವಕ್ಕೆ ತನಗೆ ಅಂದು ಬರಲಾಗುವುದಿಲ್ಲವೆಂದು ಖೇದ ವ್ಯಕ್ತ ಪಡಿಸುತ್ತಾ,ಮೊನ್ಸಿಜೆಂರ್ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್‍ರವರು ಅ|ವಂ|ಸ್ಟ್ಯಾನಿ ತಾವ್ರೊರವರ ಬಾಳಿನ ಬಹುಮುಖ್ಯ ಸಂಭ್ರಮಕ್ಕೆ ಶುಭ ಕೋರಿ ಅವರನ್ನು ಸನ್ಮಾನಿಸಿದರು.




















