ಕುಂದಾಪುರ; ಯು.ಬಿ.ಎಂ.ಸಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸಿ.ಎಸ್.ಐ ಕೃಪ ವಿದ್ಯಾಲಯ ಕುಂದಾಪುರ ಇದರ 12ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜೊತೆಗೆ ಯು.ಬಿ.ಎಂ.ಸಿ. ಅಂಗನವಾಡಿಯ ವಾರ್ಷಿಕೋತ್ಸವವು ಡಿಸೆಂಬರ್ ೫ ರಂದು ಸಂಭ್ರಮದಿಂದ ನಡೆಯಿತು.
ಸಿ. ಎಸ್.ಐ ಉಡುಪಿ ಪ್ರದೇಶದ ಅಧ್ಯಕ್ಷರಾದ ರೆವೆರಂಡ್ ಫಾದರ್ ಐವನ್ ಡಿಸೋನ್ಸ್ ಅವರು ಕಾರ್ಯಕ್ರಮವನ್ನು ದ್ವೀಪ ಬೆಳಗಿಸಿ ಉದ್ಘಾಟಿಸಿ ‘ನಮ್ಮ ಶಾಲೆಗಳಲ್ಲಿ ಆಯಾಯ ಮಕ್ಕಳ ಮೇಲೆ ಮುತುವರ್ಜಿ ವಹಿಸಿ ಮಕ್ಕಳಿಗೆ ಕಲಿಸುತ್ತಾರೆ, ಮಕ್ಕಳಿಗೆ ಬರೆ ಕಲಿಕೆ ಅಲ್ಲ, ಮಕ್ಕಳನ್ನು ರೂಪಿಸಬೇಕು, ಅವರು ಮುಂದೆ ಯಾವ ಪರಿಸ್ಥಿಯಲ್ಲಿಯೂ ಜೀವನ ನಡೆಸಬೇಕಾದಂತೆ ನಾವು ಅವರನ್ನು ರೂಪಿಸಬೇಕು, ಮಕ್ಕಳು ತಮ್ಮ ಮನೆಯಲ್ಲಿ ಕೆಲಸ ಮಾಡಬೇಕು, ಮುಂದಿನ ಜೀವನಕ್ಕೆ ಸಜ್ಜುಗೊಳಿಸಬೇಕು’ ಎಂದು ಸಂದೇಶ ನೀಡಿದರು.
ಸಿಎಸ್ಐ ಕೃಪ ವಿದ್ಯಾಲಯ ಚರ್ಚ್ ನ ಸಭಾಪಾಲಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರೆವರೆಂಡ್ ಫಾದರ್ ಇಮ್ಮಾನುವೇಲ್ ಜಯಕರ್ ಆಶೀರ್ವಚನ ಮಾಡಿ ‘ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತ ಪ್ರತಿಭೆ, ಸೃಜನಶೀಲತೆ ಇರುತ್ತದೆ. ಆರಂಭದ ಹಂತದಲ್ಲಿ ಮೊದಲು ತಾಯಿ, ತಂದೆ ಮತ್ತು ಶಿಕ್ಷಕರು ಈ ಮೂವರಿಗೆ ಮಕ್ಕಳನ್ನು ರೂಪಿಸುವ ಜವಾಬ್ದಾರಿ ಇರುತ್ತೆ’, ಮಗುವಿನ ಸಾಮರ್ಥ್ಯ, ಗುರಿಯನ್ನು ಅರಿತುಕೊಂಡು ಪ್ರೋತ್ಸಾಹಿಸಿದಾಗ, ಮುಂದೆ ಆ ಮಗು ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಎಂದು ಅವರು ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಹೋಬಳಿಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಶೇಖರ್ ಪಡುಕೋಣೆ, ಮಾತನಾಡಿ ‘ಬದಲಾವಣೆ ಸ್ವಲ್ಪ ನೋವು ತರುತ್ತದೆ, ಇಂದಿನ ಯುಗದಲ್ಲಿ ಪೋಷಕರು ಬದಲಾಗಬೇಕು, ಮಕ್ಕಳನ್ನು ಶಿಕ್ಷಿಸಬಾರದು, ಮ್ರದು ಭಾಷೆಯಲ್ಲಿ ಅವರನ್ನು ತಿದ್ದಬೇಕು’ ಎಂದು ಹೇಳಿದರು. ಕುಂದಾಪುರ ಪುರಸಭೆ ಸದಸ್ಯೆ ಶ್ರೀಮತಿ ಪ್ರಭಾವತಿ ಶೆಟ್ಟಿ, ಅಂಗನವಾಡಿಯ ಶಿಕ್ಷಕಿ ವಿಧ್ಯಾ ಅವರು ಮಾತನಾಡಿದರು. ವಿದ್ಯಾರ್ಥಿ ನಾಯಕ ಮಾಸ್ಟರ್ ವಿಸ್ಮಿತ್ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಐರೆನ್ ಸಾಲಿನ್ಸ್ ಅವರು ಸ್ವಾಗತಿಸಿದರು. ಯು.ಬಿ.ಎಂ.ಸಿ. ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಅನಿತಾ ಆಲಿಸ್ ಡಿಸೋಜ, ಸಿ.ಎಸ್.ಐ. ಕೃಪ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸವಿತಾ ಅವರು ಶಾಲಾ ವರದಿಯನ್ನು ವಾಚಿಸಿದರು. ಅಂಗನವಾಡಿಯ ಪುಟ್ಟ ಮಕ್ಕಳು ಯಕ್ಷಗಾನ ಕುಣಿತದಿಂದ ಪ್ರೇಕ್ಷಕರಿಗೆ ರಂಜಿಸಿದರು, ಅಲ್ಲದೆ ಯು.ಬಿ.ಎಂ.ಸಿ. ಆಂಗ್ಲ ಮಾಧ್ಯಮ ಶಾಲೆಯ ಮತ್ತು ಸಿ.ಎಸ್.ಐ. ಕೃಪ ಶಾಲೆಯ ವಿದ್ಯಾಥಿಗಳು ಮನೋರಂಜನೆಯ ಪ್ರದರ್ಶನ ನೀಡಿದರು.
ವಿದ್ಯಾರ್ಥಿನಿ ಕುಮಾರಿ ಪ್ರಣತಿ, ಸಹ ಶಿಕ್ಷಕಿ ಶ್ರೀಮತಿ ಪವಿತ್ರ ಕೊತ್ವಾಲ್ ವಂದಿಸಿದರು.
Kundapur; UBMC English Medium and CSI Kripa Schools celebrate 12th anniversary
Kundapur; UBMC English Medium School and CSI Kripa Vidyalaya Kundapur celebrated its 12th anniversary along with the anniversary of UBMC Anganwadi on December 5th.
CSI Udupi Region President Reverend Father Ivan Desons inaugurated the program by lighting a lamp and gave the message, ‘In our schools, we take care of our children and teach them, it is not just about learning to read and write, we should shape them, we should shape them so that they can live in any situation in the future, children should work at home, and prepare them for their future life.’
Reverend Father Emmanuel Jayakar, the pastor of CSI Kripa Vidyalaya Church and the chairman of the school development committee, blessed the gathering and said, “Every child has hidden talent and creativity. At the initial stage, the responsibility of shaping children lies with the mother, father and teachers.” When the child’s potential and goals are understood and encouraged, the child will be able to grow into a good citizen later. He gave a message.
The chief guest, Shekhar Padukone, Director of the Education Department of Kundapur Hobli, spoke and said, “Change brings some pain. In today’s era, parents should change, children should not be punished, they should be corrected in a harsh language.” Kundapur Municipality Member Mrs. Prabhavathi Shetty and Anganwadi teacher Vidhya spoke. Student leader Master Wismith were present.
The coordinator of the organization, Mrs. Irene Sallins, welcomed the gathering. U.B.M.C. The Principal of the English Medium School, Mrs. Anita Alice D’Souza, and the Headmistress of the C.S.I. Krupa School, Mrs. Savita, read out the school report. Student Kumari Pranati and fellow teacher Mrs. Pavithra Kotwal proposed the vote of thanks.