ಕುಂದಾಪುರ: ಮಣಿಪುರ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಮೌನ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಯ ಝೆಂಕಾರ

ಕುಂದಾಪುರ, 2 93 ದಿನಗಳ ಹಿಂದೆ ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಅತ್ಯಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಮೌನವಾಗುವ ಮೂಲಕ ಇಡೀ ದೇಶವೇ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ ‘ಮಣಿಪುರದ ಜನಾಂಗೀಯ ಕಲಹವನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದ ಅವರು, ಸಂಸತ್ ಕಲಾಪದಲ್ಲಿ ಮೋದಿ ಮೌನವಾಗಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಬುಡಮೇಲು ಮಾಡಲು ಹೊರಟಿರುವುದು ಆಘಾತಕಾರಿ ವಿಷಯ. ಮಣಿಪುರದ ಬುಕಟ್ಟು ಜನಾಂಗಕ್ಕೆ ನ್ಯಾಯ ಸಿಗುವವರೆಗೆ ಕಾಂಗ್ರೆಸ್ ಹೋರಾಟ ಮುಮದುವರೆಯುತ್ತದೆ ಎಂದರು. ವಿಕಾಸ್ ಹೆಗ್ಡೆ ಮಾತನಾಡಿ, ಮಣಿಪುರದಲ್ಲಿ ಬಿಜೆಪಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ದೇಶದ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ, ಬೇಟಿ ಬಚಾವೋ ಬೇಟಿ ಪಡಾವೋ ಕೇವಲ ಮೋದಿಯವರ ಭಾಷಣಕ್ಕೆ ಸೀಮಿತವಾಗಿದೆ ಎಂದು ಆರೋಪಿಸಿದರು.

ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ದೇಶದಲ್ಲಿ ಸಾಮಾಜಿಕ ಸ್ವಾತಂತ್ರ್ಯವಿಲ್ಲವಾಗಿದೆ. ಸೈನಿಕನೊಬ್ಬನ ಪತ್ನಿಗೇ ಈ ರೀತಿಯ ಸಾಮೂಹಿಕ ಅತ್ಯಾಚಾರ, ಬೆತ್ತಲೆಯಾಗುವ ಪರಿಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು ಎನ್ನುವುದನ್ನು ಯೋಚಿಸಬೇಕಾಗಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಭಾರತ ಅಶಾಂತಿಯಿಂದ ಬಳಲುತ್ತಿದೆ ಎಂದು ಆರೋಪಿಸಿದರು. ಮುಖಂಡ ಶಂಕರ್ ಕುಂದರ್ ಮಾತನಾಡಿದರು ದಾರಿಯುದ್ದಕ್ಕೂ ಮಣಿಪುರದ ಮಹಿಳೆಯರೇ ನಮ್ಮೊಂದಿಗೆ ನಾವಿದ್ದೇವೆ ಎನ್ನುವ ಘೋಷಣೆ ಪ್ರತಿಭಟನೇಯ ವೇಳೆ ಮೊಳಗಿತು.

  ಪ್ರತಿಭಟನೇಯಲ್ಲಿ ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಪಂಚಾಯತ್ ಸದಸ್ಯರಾದ ವಿದ್ಯಾಧರ್, ಸೌಮ್ಯ ಮೊಗವೀರ, ಗಣಪತಿ ಶೇಟ್, ರೋಶನ್ ಬರೆಟ್ಟೊ, ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಕ್ರಷ್ಣದೇವ್ ಕಾರಂತ,ಗಣೇಶ್ ಶೇರೆಗಾರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ, ಚಂದ್ರ ಅಮೀನ್, ಚಂದ್ರ ಶೇಖರ ಶೆಟ್ಟಿ, ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಶನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ, ಗಂಗಾಧರ್ ಶೆಟ್ಟಿ, ನಾರಾಯಣ ಆಚಾರ್, ಕೇಶವ್ ಭಟ್, ಅಭಿಜಿತ್ ಪೂಜಾರಿ, ಧರ್ಮಪ್ರಕಾಶ್, ಕುಮಾರ್ ಖಾರ್ವಿ, ಮುನಾಫ್, ಸುನಿಲ್ ಪೂಜಾರಿ, ಸಚ್ಚಿದಾನಂದ , ರೇವತಿ ಶೆಟ್ಟಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಸುವರ್ಣ ಅಲ್ಮೇಡಾ, ಪ್ರಭಾವತಿ,ಸುಮನಾ ಪೂಜಾರಿ, ಸವಿತಾ ಸಿಕ್ವೇರಾ, ಜ್ಯೋತಿ ಮೋಗವಿರ, ಪ್ರೇಮಾ, ವೇಲಾ ಬ್ರಗಾಂಜ, ವಿಠಲ ಕಾಂಚನ್, ಹಾರೋನ್ ಸಾಹೇಬ್, ಮೌರಿಸ್ ಕರ್ವಾಲ್ಲೊ, ಅಬ್ದುಲ್ಲಾ ಕೋಡಿ, ಪ್ರೀತಮ್ ಕರ್ವಾಲ್ಲೊ, ಅಶೋಕ್ ಸುವರ್ಣ, ಡೋಲ್ಫಿ ಡಿಕೋಸ್ತಾ, ಜೋಸೆಫ್ ರೆಬೆಲ್ಲೊ, ಕ್ಲಿಫರ್ಡ್ ಡಿಸಿಲ್ವಾ, ಗಣೇಶ್ ನೆಲ್ಲಿ ಬೆಟ್ಟು, ರಾಕೇಶ್ ಶೆಟ್ಟಿ, ಸುರೇಶ್ ಕೆ, ಅರುಣ್ ಪಟೇಲ್, ನಾಗರಾಜ್ ನಾಯ್ಕ್, ವೇಣುಗೋಪಾಲ್, ಶ್ರೀನಿವಾಸ ಶೆಟ್ಟಿ, ಕಿರಣ್ ಕಲ್ಲಾಗಾರ, ಶಶಿ ನಂದಿಬೆಟ್ಟ ಮೊದಲಾದವರಿದ್ದರು. ವಿನೋದ್ ಕ್ರಾಸ್ತಾ ಪ್ರಾಸ್ತಾವಿಸಿ ನಿರೂಪಿಸಿದರು.