ಕುಂದಾಪುರ,ನ.27: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 26 ರಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.
ಈ ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರು ವಂ|ಫಾ| ವಿಲ್ಸನ್ ಸಲ್ಡಾನ್ಹ ನಡೆಸಿಕೊಟ್ಟು “ಮೇರಿ ಮಾತೆ ದೇವರ ವಾಕ್ಯವನ್ನು ವಿದೇಯಳಾಗಿ ನಡೆಸಿಕೊಟ್ಟ ಮಾತೆ,ಕೆಲವೊಂದು ಸಂದರ್ಭದಲ್ಲಿ ಮೇರಿ ಮಾತೆ ದೇವರ ವಾಕ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕಶ್ಟವಾಗಿತ್ತು. ಒಂದು ಸಂದರ್ಭದಲ್ಲಿ ‘ಯಾರು ನನ್ನ ತಾಯಿ, ಯಾರು ನನ್ನ ಸಹೋದರರು ಎಂದು ಕಠಿಣವಾಗಿ ಕೇಳಿದ್ದರು, ಆವಾಗ ಮೇಇ ಮಾತೆಗೆ ದುಖ, ನೋವು ಆಗಿರಬಹುದು, ಯೇಸು ಕ್ರಿಸ್ತರು ಇದನ್ನು ಯಾಕಾಗಿ ಹೇಳಿದ್ದರೆಂದರೆ, ನನ್ನ ತತ್ವಗಳನ್ನು ಯಾರು ಪಾಲಿಸುತ್ತಾರೊ, ಅವರು ನನ್ನ ತಾಯಿ, ಸಹೋದರು, ಇದನ್ನು ಮೇರಿ ಮಾತೆ ನಂತರ ಅರ್ಥೈಸಿಕೊಂಡಳು, ಹಾಗೇ ನಾವು ಅರ್ಥೈಸಿಕೊಳ್ಳಬೇಕು, ದೇವರ ವಾಕ್ಯಗಳು ನಮಗೆ ಎರಡು ಅಲಗಿನ ತಲ್ವಾರಿನಂತೆ (ಕತ್ತಿ) ನಾವು ತಪ್ಪಿ ಬಿದ್ದಾಗ ನಮ್ಮನ್ನು ಎಚ್ಚರಿಸಿ ಸರಿದಾರಿಯಲ್ಲಿ ನಡೆಯಲು ಸಹಾಯವಾಗುತ್ತೆ, ಮೇರಿ ತನ್ನ ಜೀವನವಿಡಿ ದೇವರಿಗೆ ವಿದೇಯಳಾಗಿ ನಡೆದಳೊ ಹಾಗೆ ನಾವು ನಡೆದುಕೊಳ್ಳಬೇಕು. ಎಂದು ಸಂದೇಶ ನೀಡಿದರು.
ಕುಂದಾಪುರ ಇಗರ್ಜಿಯ ಧರ್ಮಗುರುಗಳಾದ ಅ|ವಂ| ಪೌಲ್ ರೇಗೊ, ಹಿಂದಿನ ಧರ್ಮಗುರುಗಳಾದ ವಂ।ಸ್ಟ್ಯಾನಿ ತಾವ್ರೊ, ಹಿಂದಿನ ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಕೆರೆಕಟ್ಟೆ ಪುಣ್ಯಕ್ಷೇತ್ರದ ರೆಕ್ಟರ್ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.ಈ ಧಾರ್ಮಿಕ ಕಾರ್ಯಕ್ರಮದ ಪೋಷಕರಾದ ಜೂಲಿಯೆಟ್ ಪಾಯ್ಸ್, ಲವೀನಾ ಡಿಆಲ್ಮೇಡಾ, ಶರ್ಮಿಳಾ ಸುವಾರಿಸ್ ಉಪಸ್ಥಿತರಿದ್ದರು.
ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಚರ್ಚಿನ ಸದಸ್ಯರು, ನೆಂಟರು ಬಹು ಸಂಖೆಯಲ್ಲಿ ಭಾಗಿಯದಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಜನರು ಆಗಮಿಸಿ ಭಾವೈಕತೆ ಮೆರೆದರು. ಕೊನೆಯಲ್ಲಿ ಸೆಂಟ್ ಅಂತೋನಿ ಲೈಟಿಂಗ್ ಸೌಂಡ್ಸ್ ಇದರ ರಾಯನ್ ಬರೆಟ್ಟೊ ಇವರಿಂದ ಧರ್ಮಾಥವಾಗಿ ಇಗರ್ಜಿಯ ಮುಂಭಾಗದಲ್ಲಿ ಪ್ರದರ್ಶಿಸಿದ್ದ ಲೇಸರ್ ಲೈಟಿಂಗ್ ಶೋ ಜನಕಾರ್ಶಣೆಗೆ ಒಳಗಾಯಿತು.