ಕುಂದಾಪುರ (ಡಿ. 4): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಸೈನ್ಸ್ ಟೀಚಿಂಗ್ ಸ್ಕಿಲ್ಸ್” ಕುರಿತ ವಿಶೇಷ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕವಿತಾ ಭಟ್ ಮತ್ತು ರವಿಚಂದ್ರ ಇವರು ಪಾಲ್ಗೊಂಡು ತಮ್ಮ ಅನುಭವನ್ನು ಹಂಚಿಕೊಂಡರು.
ಪ್ರೀಸ್ಕೂಲ್ ಶಿಕ್ಷಕರಿಗೆ ಮಕ್ಕಳಿಗೆ ವಿಜ್ಞಾನ ಕಲಿಸುವುದು ಹೇಗೆ ಸರಳ ಮತ್ತು ಆಕರ್ಷಕವಾಗಿರಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದರ ಮೂಲಕ ತಮ್ಮ ಪ್ರಸ್ತುತಿಯಲ್ಲಿ, “ಚಿಕ್ಕ ಮಕ್ಕಳಿಗೆ ಕಲಿಕೆ ಪ್ರಕ್ರಿಯೆ ಆಟದ ಆಧಾರದಲ್ಲಿ ನಡೆಯಬೇಕು” ಎಂಬುದನ್ನು ಒತ್ತಿಹೇಳಿ, ಕಲಿಕೆಯ ಸಲಕರಣೆಗಳ ರೂಪುರೇಷೆ, ಆಕರ್ಷಕ ಚಟುವಟಿಕೆಗಳ ಮಹತ್ವವನ್ನು ಕವಿತಾ ಭಟ್ ವಿವರಿಸಿದರು.
ರವಿಚಂದ್ರ ಇವರು ತಮ್ಮ ಅನನ್ಯ ಶೈಲಿಯ ಮೂಲಕ, ಚಿಕ್ಕ ಮಕ್ಕಳ ಮನಸ್ಸನ್ನು ಸೃಜನಶೀಲತೆಯಿಂದ ತುಂಬಿಸುವಂತೆ ಪ್ರಾಯೋಗಿಕ ಚಟುವಟಿಕೆಗಳನ್ನು ಹಾಗೂ ಮಕ್ಕಳಿಗೆ ಬಣ್ಣಗಳ ಸಂಯೋಜನೆ, ಬೆಳಕು ಮತ್ತು ನೆರಳಿನ ಆಟ, ಮತ್ತು ಸಣ್ಣ ರಸಾಯನ ಪ್ರಕ್ರಿಯೆಗಳ ಪ್ರಸ್ತುತಪಡಿಸಿದರು.
ಸಂಸ್ಥೆಯ ಪ್ರಾಂಶುಪಾಲೆಯಾಗಿರುವ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು. ಶಿಕ್ಷಕ ವಿದ್ಯಾರ್ಥಿನಿಯರಾದ ರಜನಿ, ಶಾಲಿನಿ ಮತ್ತು ಶ್ರುತಿ ಕಾರ್ಯಕ್ರಮವನ್ನು ನಿರೂಪಿಸಿದರು.