ಕುಂದಾಪುರ: ಸ್ಥಳೀಯ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಶಿಕಕ ರಕ್ಷಕ ಸಭೆಯು ಜು 22 ರಂದು ಶಾಲಾ ಸಭಾಂಗಣದಲ್ಲಿ ನೆಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. ವಿದ್ಯಾರ್ಥಿನಿಯರು ನೃತ್ಯದ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಹೋಲಿ ರೋಜರಿ ಹಾಗೂ ಸಂತಮೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸ್ಥಳೀಯ ಹೋಲಿ ರೋಜರಿ ಚರ್ಚಿನ ಪ್ರದಾನ ಧಮಗುರುಗಳು ಅ| ವಂ| ಪೌಲ್ ರೇಗೊ ಸಭೆಯ ಅಧ್ಯಕತೆಯನ್ನು ವಹಿಸಿದ್ದರು. ಲೆಸ್ಲಿ ಆರೋಜಾ ಆಪ್ತ ಸಮಾಲೋಚಕರು ಬಿಷಪ್ ಹೌಸ್ ಉಡುಪಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನದ ಕುರಿತು ಹಾಗು ಮಕ್ಕಳ ಪಾಲನೆಯಲ್ಲಿ ಹೆತ್ತವರ ಕರ್ತವ್ಯದ ಕುರಿತು, ಮಕ್ಕಳ ಮೇಲೆ ಮಾಧ್ಯಮಗಳ ಪ್ರಭಾವದ ಕುರಿತು ತಿಳುವಳಿಕೆ ನೀಡಿದರು.
ಶಾಲಾ ಮುಖೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ರವರು ಶಾಲಾ ನಿಯಮ ಹಾಗೂ ಶಾಲೆಗೆ ಸಂಬಂಧಿಸಿದ ಮಾಹಿತಿಯನ್ನು ಪೋಷಕರರಿಗೆ ತಿಳಿಸಿದರು. ಶಾಲಾ ಶೈಕ್ಷಣಿಕ ಮಾರ್ಗದರ್ಶಕರಾದ ಮಾರ್ಗರೇಟ್ ಪ್ರೆಸಿಲ್ಲಾ ಪಿಕಾರ್ಡೊರವರು ಪೋಷಕರು ಮಕ್ಕಳಿಗೆ ನೀಡಬೇಕಾದ ಸಲಹೆ ಸೂಚನೆಗಳ ಬಗ್ಗೆ ತಿಳುವಳಿಕೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಗುರು ಪೌಲ್ ರೆಗೋರವರು ಪೋಷಕರನ್ನು ಉದ್ದೇಶಿಸಿ ‘ಮನೆಯೇ ಮೊದಲ ಪಾಠ ಶಾಲೆ, ತಾಯಿ ತಂದೆಯವರೇ ಮೊದಲ ಗುರು, ಆದ್ದರಿಂದ ನೀವು ನಿಮ್ಮ ಮಕ್ಕಳಿಗೆ ಶೈಕ್ಷಣಿಕ, ಭಾವನ್ಮಾಕ, ನೈತಿಕ, ಅದ್ಯಾತ್ಮಿಕ ಜ್ಞಾನವನ್ನು ನೀಡಿ ಬೆಳಿಸಿರಿ ತಾವೆಲ್ಲರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದೀರಿ ನಿಮಗೂ ನಿಮ್ಮ ಮಕ್ಕಳಿಗೂ ಹಾಗು ಈ ವಿದ್ಯಾಸಂಸ್ಥೆಗೂ ದೇವರ ಆಶೀರ್ವಾದವಿರಲಿ’ ಎಂದು ಹಾರೈಸಿದರು.
ಸಭೆಯಲ್ಲಿ ಸುಮಾರು 350 ಮಂದಿ ಪೋಷಕರು ಉಪಸ್ಥಿತರಿದ್ದರು. ಶಿಕ್ಷಕ ಓರನ್ ಡಿ’ಸೋಜಾರವರು ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ಹೆಗ್ಡೆ ಹಿಂದಿನ ವರ್ಷದ ಶಿಕ್ಷಕ-ರಕ್ಷಕ ಸಂಘದ ವರದಿ ವಾಚಿಸಿದರು.
ಶ್ರೀಮತಿ ನಿಮಿಷಾ ಗೊನ್ಸಾಲ್ವಿಸ್ರವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಶಿಕ್ಷಕಿ ಪ್ರತಿಮಾ ಶೆಟ್ಟಿಯವರು ಶಾಲಾ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ವರದಿ ವಾಚಿಸಿದರು. ಶಿಕ್ಷಕಿ ಕುಮಾರಿ ರಮ್ಯಾರವರು ವಂದಿಸಿದರು ಶಿಕ್ಷಕ ಲೂವಿಸ್ ಪ್ರಶಾಂತ್ರವರು ಕಾರ್ಯಕ್ರಮ ನಿರೂಪಿಸಿದರು.