ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಯಡಮೊಗೆ ಉದಯ ಗಾಣಿಗರಿಗೆ ಶ್ರದ್ದಾಂಜಲಿ ಸಭೆ

JANANUDI.COM NETWORK


ಕುಂದಾಪುರ: ಪ್ರಗತಿಪರ ಕೃಷಿಕ, ಸಾಮಾಜಿಕ ಕಾರ್ಯಕರ್ತ ಯಡಮೊಗೆ ಉದಯ ಗಾಣಿಗ ಹತ್ಯೆಯಿಂದ ಒಬ್ಬ ಒಳ್ಳೆಯ ಕೃಷಿಕನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ಜತೆಗೆ ಅವರ ಕುಟುಂಬವು ಸಹ ಅನಾಥವಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.
ಅವರು ಭಾನುವಾರ ಕುಂದಾಪುರ ವ್ಯಾಸರಾಜ ಮಠದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಆಶ್ರಯದಲ್ಲಿ ನಡೆದ ಯಡಮೊಗೆ ಉದಯ ಗಾಣಿಗ ಅವರ ಶೃದ್ದಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಉದಯ ಗಾಣಿಗ ಅದೆಷ್ಟೋ ಕೃಷಿಕರ ಪಾಲಿಗೆ ತರಬೇತುದಾರರಾಗಿ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಮಣ್ಣನ್ನು ಕೈಯಲ್ಲಿ ಹಿಡಿದ ತಕ್ಷಣ ಆ ಮಣ್ಣನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂದು ಹೇಳುವಷ್ಟು ಕೃಷಿಯಲ್ಲಿ ಜ್ಞಾನವನ್ನು ಹೊಂದಿದ್ದರು ಎಂದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು, ಮಾಜಿ ಅಧ್ಯಕ್ಷ ಕೊಗ್ಗ ಗಾಣಿಗ, ಬಾರಕೂರು ಸೋಮಕ್ಷತ್ರೀಯ ಗಾಣಿಗ ಸಮಾಜದ ಅಧ್ಯಕ್ಷ ವಾಸುದೇವ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಮಾಜಿ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ, ಸಂಪರ್ಕಸುಧಾ ಪತ್ರಿಕೆಯ ಸಂಪಾದಕ ರಘುರಾಮ ಬೈಕಾಡಿ, ಉಡುಪಿ ಜಿಲ್ಲಾ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಕೋಟ ದಿನೇಶ್ ಗಾಣಿಗ ಮೊದಲಾದವರು ನುಡಿನಮನ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯಡಮೊಗೆ ಉದಯ ಗಾಣಿಗರ ಪತ್ನಿ ಜ್ಯೋತಿ, ತಂದೆ ಮಹಾಬಲ ಗಾಣಿಗ, ಉದಯ ಗಾಣಿಗರ ಸ್ನೇಹಿತ ಯಡಮೊಗೆಯ ಗುಂಡು ಶೆಟ್ಟಿ, ಕುಂದಾಪುರ ತಾಲ್ಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಬಸ್ರೂರು, ಮಾಜಿ ಕೋಶಾಧಿಕಾರಿ ಪರಮೇಶ್ವರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.