

ಕುಂದಾಪುರ.ಆ. 7: ಕತ್ತಲೆಯಲ್ಲಿ ಯೇಸು ಕ್ರಿಸ್ತರ ಶಿಲುಭೆ ಅಥವ ಯೇಸು ಕ್ರಿಸ್ತರ ಶವ ರೂಪದ ಪ್ರತಿಮೆ ಇಟ್ಟು ದೀಪಗಳ ಬೆಳಕಿನಲ್ಲಿ ನೆಡೆಸುವಂವತಹ ತೈಝೆ ಪ್ರಾರ್ಥನೆ ಕುಂದಾಪುರ ರೋಜರಿ ಚರ್ಚಿನಲ್ಲಿ ಐ.ಸಿ.ವೈ.ಎಮ್ ಸಂಘಟನೆ ನೇತ್ರತ್ವದಲ್ಲಿ ಏರ್ಪಡಿಸಲಾಗಿತ್ತು.
ಭಾನುವಾರ ಜು.6 ರಂದು ಸಂಜೆ ಬೆಳಕು ಇರುವಾಗ ವಂ|ಧರ್ಮಗುರು ಸಿರಿಲ್ ಲೋಬೊ ಭಾರತೀಯ ಕ್ರೈಸ್ತ ಯುವ ಜನರಿಗೆ ಪ್ರವಚನ ನೀಡಿದರು. ಸಂಜೆ ಕತ್ತಲಾದ ನಂತರ ಯೇಸು ಕ್ರಿಸ್ತರ ಶಿಲುಭೆಯನ್ನು ಇಟ್ಟು ದೀಪಗಳನ್ನು ಉರಿಸಿ, ಗೀತೆ ಗಾಯನ, ಆರಾದನೆಯೊಂದಿಗೆ ತೈಝೆ ಪ್ರಾರ್ಥನೆಯನ್ನು ಧರ್ಮಗುರು ವಂ|ಧರ್ಮಗುರು ಸಿರಿಲ್ ಲೋಬೊ ನಡೆಸಿಕೊಟ್ಟರು.
ಈ ಪಾರ್ಥನ ಕೂಟಕ್ಕೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶುಭ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಐ.ಸಿ.ವೈ.ಎಮ್. ಅಧ್ಯಕ್ಷ ನಿತಿನ್ ಬರೆಟ್ಟೊ, ಕಾರ್ಯದರ್ಶಿ ಜಾಸ್ನಿ ಡಿಆಲ್ಮೇಡಾ, ಸಂಘಟನೇಯ ಸಚೇತಕರಾದ ಶಾಂತಿ ರಾಣಿ ಬರೆಟ್ಟೊ, ಜೇಸನ್ ಪಾಯ್ಸ್ ಉಪಸ್ಥಿತರಿದ್ದರು. ಪದಾಧಿಕಾರಿಗಳು, ಸದಸ್ಯರು, ಧರ್ಮಭಗಿನಿಯರು ಮತ್ತು ಕುಂದಾಪುರ ರೋಜರಿ ಚರ್ಚಿನ ಭಕ್ತಾಧಿಗಳು ಈ ಪ್ರಾರ್ಥನ ಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾದರು.








