ಕುಂದಾಪುರ,ಎ.16: ‘ನಮ್ಮ ರೋಜರಿ ಚರ್ಚಿನ ಮಕ್ಕಳು ವಿದ್ಯಾಭಾಸಕ್ಕಾಗಿ ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಾರೆ, ಆದರೆ ಇಂದು ನೀವುಗಳೆಲ್ಲ ಒಟ್ಟಾಗಿದ್ದಿರಿ, ಹೀಗೆ ಸೇರುವುದು ಅಪರೂಪ, ನೀವುಗಳು ಇಂದು ಒಬ್ಬರನೊಬ್ಬರನ್ನು ಪರಿಚಯ ಮಾಡಿಕೊಳ್ಳಬೇಕು, ನಾವು ಕಾಡಿಗೆ ಹೋದರು ಯಾವುದೇ ನಾಡಿಗೆ ಹೋದರು ಕೊನೆಗೆ ನಾವು ಕುಂದಾಪುರದವರೇ ಆಗುತ್ತಾರೆ, ನಮ್ಮ ಭಾಗ್ಯವಂತೆ ರೋಜರಿ ಮಾತಾ ಚರ್ಚ್ ಉಡುಪಿ ಜಿಲ್ಲೆಯಲ್ಲೆ ಪುರಾತನವಾಗಿದ್ದು, ಇದು ನಮಗೆ ಸಿಕ್ಕಿದ ಭಾಗ್ಯ, ಅದರಲ್ಲೂ ನಮಗೆ ಪೆÇೀಷಕಿ ಸಿಕ್ಕಿದು ಯೇಸು ಕ್ರಿಸ್ತರ ಮಾತೆ ಭಾಗ್ಯವಂತೆ ರೋಜರಿ ಮಾತೆ, ನಾವೆಲ್ಲ ಒಂದು ಕುಟುಂಬದಂತೆ ಬಾಳಬೇಕು, ಈ ಶಿಬಿರದಲ್ಲಿ ನೀವು ಕಲಿಯುವುದು ಸಾಕಷ್ಟಿದೆ, ಅಸಕ್ತಿಯಿಂದ ಈ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಲಾಭವನ್ನು ತಮ್ಮದಾಗಿಸಿಕೊಳ್ಳಬೇಕು’ ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಅ|ವಂ|ಸ್ಟ್ಯಾನಿ ತಾವ್ರೊ ಹೇಳಿದರು. ಅವರು ಕುಂದಾಪುರ ಚರ್ಚಿನ ವ್ಯಾಪ್ತಿಯಲ್ಲಿ ಬರುವ. 5 ರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಎರ್ಪಡಿಸಲ್ಪಟ್ಟ ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಸಂದೇಶ ನೀಡಿದರು.
ಶಿಬಿರದ ಮುಂದಾಳಾತ್ವವನ್ನು ವಹಿಸಿಕೊಂಡ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ‘ಈ ಶಿಬಿರದಲ್ಲಿ ನಾವು ಪವಿತ್ರ ಸಭೆಯ ವಿಷಯದಲ್ಲಿ ತಿಳುವಳಿಕೆ, ಪವಿತ್ರ ಸಭೆಯನ್ನು ಪ್ರೀತಿಸುವುದು, ದೇವರ ವಾಕ್ಯಗಳ ಜ್ಞಾನ ಸಂಪಾದನೆ, ಕ್ರಿಸ್ತಿ ಮೌಲ್ಯಗಳ ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಕಲಿಯುವುದರ ಜೊತೆ ಜೀವನದಲ್ಲಿ ಸಹಕಾರಿಯಾಗುವ ಹಲವಾರು ವಿಷಯಗಳ ಬಗ್ಗೆ ಈ ಶಿಬಿರದಲ್ಲಿ ಕಲಿಯುವುದು ಇದೆ ಎಂದು ಶಿಬಿರಾರ್ತಿಗಳಿಗೆ ತಿಳಿಸಿದರು.
ಉದ್ಘಾಟನ ಕಾರ್ಯಕ್ರಮದಲ್ಲಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂದನೀಯ ಸಿಸ್ಟರ್ ಸುಪ್ರಿಯಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವೈ.ಸಿ.ಎಸ್. ಸಂಚಾಲಕಿ ಶೈಲಾ ಡಿಆಲ್ಮೇಡಾ, ನೀತಿ ಶಿಕ್ಷಣ ಶಿಕ್ಷಕಿ ಮೇಲಿಶಾ ಬಾರೆಟ್ಟೊ, ಉಪಸ್ಥಿತರಿದ್ದರು. ಚರ್ಚಿನ ಸ್ತ್ರಿ ಸಂಘಟನೆ ಶಿಬಿರಾರ್ಥಿಗಳಿಗೆ ಊಟ ತಿಂಡಿ ಸಿದ್ದಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕೆ ವೀಶೆಷ ಅಭಿನಂದನೆ ಸಲ್ಲಿಸಲಾಯಿತು. ಇಂಚರ ಫೆರ್ನಾಂಡಿಸ್ ಮತ್ತು ಹೇವಿನ್ ಕೋತ್ ನಿರೂಪಿಸಿ ವಂದಿಸಿದರು.