

ಕುಂದಾಪುರ,ಎ.13: “ಶಿಬಿರಗಳು ನಿಮ್ಮ ಭವಿಸ್ಯವನ್ನು ರೂಪಿಸಿಕೊಳ್ಳಲು ಆಧಾರವಾಗುತ್ತವೆ ಎಂದು ನೀವು ಮರೆಯಬಾರದು, ಇಂತಹ ಶಿಬಿರಗಳಲ್ಲಿ, ನಿಮಗೆ ಬಹಳಷ್ಟು ಕಲಿಯಲು ಸಿಗುತ್ತದೆ, ಸಂಗೀತ, ನಾಟ್ಯ, ಆಟ, ಪಾಠ, ಕ್ರೀಡೆ, ಮನೋರಂಜನೆ, ಸಾಹಿತ್ಯ, ಮುಂದಿನ ಜೀವನಕ್ಕೆ ಆಧಾರವಾಗುವಂತ ಅನುಭವದ ಭಾಷಣಗಳು, ಮಾತು ಕತೆ ವಿನಿಮಯ, ಮುಂದಿನ ವಿದ್ಯಾಭಾಸದ ನೋಟ, ಇವೆಲ್ಲವೂ ಈ ಶಿಬಿರದಲ್ಲಿ ಅಡಕವಾಗಿರುತ್ತವೆ” ಎಂದು ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹೇಳಿದರು.
ಅವರು ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿ ಬರುವ 5 ರಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಎರ್ಪಡಿಸಲ್ಪಟ್ಟ ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. “ಎಳೆಯದರಲ್ಲಿ ಕಲಿತ ಸಂಗತಿಗಳು, ಮಕ್ಕಳಲ್ಲಿ ಒಳ್ಳೆಯ ಪ್ರಭಾವ ಬೀರುತ್ತವೆ, ಆದರಿಂದ ಈ ಶಿಬಿರದಲ್ಲಿ ನಿಮಗೆ ಕಲಿಸುವ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಿ” ಎಂದು ಸಂದೇಶ ನೀಡಿದರು.
ಶಿಬಿರದ ಮುಂದಾಳಾತ್ವವನ್ನು ವಹಿಸಿಕೊಂಡ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ “ಶಿಬಿರದ ಮಕ್ಕಳು ಒಂದು ಕುಟುಂಬದ ಮಕ್ಕಳಂತೆ ಪ್ರೀತಿಯಿಂದ ಇದ್ದು, ನಾವು ಒಗಟ್ಟಿನಲ್ಲಿರಬೇಕು, ಇಲ್ಲಿ ಕಲಿಯಲು ಸಿಗುವುದನ್ನು ಆಸಕ್ತಿಯಿಂದ ಮನನ ಮಾಡಿಕೊಳ್ಳಬೇಂದು” ಶಿಬಿರ ಯಶಸ್ವಿಯಾಗಲು ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. 3 ದಿವಸಗಳ ಈ ಶಿಬಿರದಲ್ಲಿ ಹಲವಾರು ಸಂಪನ್ಮೂಕ ವ್ಯಕ್ತಿಗಳಿಂದ ಮಾರ್ಗದರ್ಶನ ಸಿಗುವ ಈ ಶಿಬಿರಕ್ಕೆ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಚರ್ಚಿನ ಸ್ತ್ರಿ ಸಂಘಟನೆ ಶಿಬಿರಾರ್ಥಿಗಳಿಗೆ ಊಟ ತಿಂಡಿ ಸಿದ್ದಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಕ್ಕೆ ವೀಶೆಷ ಅಭಿನಂದನೆ ಸಲ್ಲಿಸಲಾಯಿತು. ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ ಡಿಆಲ್ಮೇಡಾ ನಿರೂಪಿಸಿದರು, ಶಿಕ್ಷಕಿ ವೀಣಾ ಡಿಸೋಜಾ ವಂದಿಸಿದರು.


















