ಕುಂದಾಪುರ,ಫೆ.10: ನಮ್ಮ ಸರ್ಕಾರವು ಕೇವಲ ಭಾಗ್ಯಗಳ ಸರ್ಕಾರವಲ್ಲಾ, ಎಲ್ಲಾ ರೀತಿಯಲ್ಲಿಯೂ ಅಭಿವ್ರದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಸರ್ಕಾರ ಹಾಗೂ ಇಲಾಖೆಯಿಂದ ಜನರಿಗೆ ಸಿಗಬೇಕಾದ ಎಲ್ಲಾ ಉಚಿತ ಸೇವೆಗಳು ದೊರಕುವಂತಾಗಬೇಕು.
ಮೆಡಿಕಲ್ ಸಪ್ಲೈ ಕಾರ್ಪೋರೇಷನ್ ನನ್ನು ಸಂಪೂರ್ಣವಾಗಿ ಸುಧಾರಣೆ ಮಾಡಿಸಿ, ಉನ್ನತೀಕರಣ ಮಾಡುವ ಕೆಲಸವನ್ನು ಆಧ್ಯತೆಯಲ್ಲಿ ಮಾಡುತ್ತೇವೆ ಎಂದು ಆರೋಗ್ಯ ಮತ್ತು ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕು. ಕ. ಇಲಾಖೆ, ಉಡುಪಿ ಜಿಲ್ಲೆ ಉಪವಿಭಾಗೀಯ ಸಾರ್ವಜನಿಕ. ಆಸ್ಪತ್ರೆ, ಕುಂದಾಪುರ ಇಲ್ಲಿನ ಅಖಿಲ ಭಾರತ್ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್ ರೀಚ್ ಸರ್ವೀಸ್ ಸೆಂಟರ್ ನ ನೂತನ ಕಟ್ಟಡ ಹಾಗೂ ನೂತನ ಡಯಾಲಿಸಿಸ್ ಘಟಕ ಉದ್ಭಾಟನೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಟ್ಟಾರೆಯಾಗಿ 800 ಡಯಾಲಿಸಿಸ್ ಘಟಕವನ್ನು ಸ್ಥಾಪನೆ ಮಾಡ್ತಿದ್ದೇವೆ. 48 ಹೊಸ ಆರೋಗ್ಯ ಕೇಂದ್ರವನ್ನು ನಿರ್ಮಿಸುವುದಕ್ಕೆ. ಇಲಾಖೆ ಮಟ್ಟದಲ್ಲಿ ಹಾಗೂ ಸರ್ಕಾರ ಮಟ್ಟದಲ್ಲಿ ಯೋಜಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿರುವ ಇರುವ ಎಲ್ಲಾ ಲೋಪ ದೋಷಗಳನ್ನು ಸರಿಮಾಡಲು ನಮ್ಮ ಸರ್ಕಾರ ಸಂಪೂರ್ಣ ಕಟಿಬದ್ಧವಾಗಿದೆ. ಜನರಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಸುಮಾರು 500 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದ್ದೇವೆ. ತಾಲೂಕು ಕೆಂದ್ರಗಳಲ್ಲಿ ಕೊರತೆ ಇರುವ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಅವರು ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಔಟ್ ರೀಚ್ ಸರ್ವೀಸ್ ಸೆಂಟರ್ ನ ನೂತನ ಕಟ್ಟಡ ಈ ಭಾಗಕ್ಕೆ ಬಹಳ ಅಗತ್ಯವಿತ್ತು, ಇದರ ದಾನಿಗಳಾದ ಶಿವರಾಮ್ ಪುತ್ರನ್ ಮತ್ತು ಮಕ್ಕಳು ಮಾಡಿದ್ದಾರೆ. ಅವರು ಹೃದಯ ಶ್ರೀಮಂತಿಕೆಗೆ ಉಳ್ಳವರು, ಇವರ ಕಾರ್ಯ ಇತರರಿಗೆ ಪ್ರೇರಣೆಯಾಗುವಂತಹ ಕೆಲಸ. ಹಾಗೇ ಇವರೊಂದಿಗೆ ಕೈಜೋಡಿಸಿದ
ರೋಟರಿ ಕ್ಲಬ್ ಕುಂದಾಪುರ ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಗಳಿಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಹೇಳಿದರು.
ಸರ್ಕಾರ ಹಾಗೂ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಉಚಿತ ಸೇವೆಗಳು ದೊರಕುವಂತಾಗಬೇಕು. ಮೆಡಿಕಲ್ ಸಪ್ಟೈ ಕಾರ್ಪೋರೇಷನ್ ಸಂಪೂರ್ಣವಾಗಿ ಸುಧಾರಣೆ ಮಾಡಿಸಿ, ಉನ್ನತೀಕರಣ ಮಾಡುವ ಕೆಲಸವನ್ನು ಆಧ್ಯತೆಯಲ್ಲಿ ಮಾಡುತ್ತೇವೆ. ಸರ್ಕಾರದ ಸೇವೆಗಳು,ಯೋಜನೆಗಳು ಜನರಿಗೆ ತಲುಪವಂತಹ ಕೆಲಸ ಮಾಡಬೇಕಾಗಿದೆ. ಸಿಬ್ಬಂದಿಗಳ ಕೊರತೆಯನ್ನು ನೀಗಿಸುವ ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆ. ಎಂದು ಸಚಿವರು ಭರವಸೆ ನೀಡಿದರು
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಲಿ, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಹಾಸಿಗೆಯ ಕೊರತೆ ಇದೆ, ಆಸ್ಪತ್ರೆಯ ಕಟ್ಟಡ ದುರಸ್ತಿಯ ಬಗ್ಗೆ ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಕಟ್ಟಡ ಬಹಳ ಹಳೆಯದಾಗಿದ್ದು ನೂತನವಾಗಿ ಕಟ್ಟದಲ್ಲಿ ಅನುಕೂಲ ಹೆಚ್ಚುತ್ತದೆ ಅದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು ಎನ್ನುತ್ತಾ, ಸಿಟಿ ಸ್ಕ್ಯಾನ್, ಡಯಾಲಿಸಿಸ್ ಹೆಚ್ಚುವರಿ ಘಟಕದ ಸ್ಥಾಪನೆ ಹಾಗೂ ಸಿಬ್ಬಂದಿ ಕೊರತೆಯನ್ನು ನೀಗಿಸುವಂತೆ ಸಚಿವರಲ್ಲಿ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯ. ಮಂಜುನಾಥ ಭಂಡಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿ ಡಾ.ಐ. ಪಿ ಗಡಾದ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ನಿರ್ದೇಶಕಿ ಪ್ರೊ.ಎಮ್. ಪುಷ್ಪವತಿ, ಪುರಸಭಾ ಸದಸ್ಯೆ ದೇವಕಿ ಪಿ. ಸಣ್ಣಯ್ಯ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಕಟ್ಟಡ ದಾನಿಗಳಾದ ಶಿವರಾಮ ಪುತ್ರನ್ ಹಾಗೂ ರೋಟರಿ ಕ್ಲಬ್ ಕುಂದಾಪುರದ ಸತ್ಯನಾರಾಯಣ ಪುರಾಣಿಕ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ ಹಾಗೂ ಪಾಕ್ ಶ್ರವಣ ಕೇಂದ್ರಕ್ಕೆ ನಿರ್ಮಿಸಲು ಸಹಕಾರ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.