ಕುಂದಾಪುರ, ಜು.2: ಸೈoಟ್ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ .. ಜುಲೈ ತಿಂಗಳ 2 ನೇ ತಾರೀಖಿನ ಮಂಗಳವಾರ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಚರ್ಚಿನ ಧರ್ಮ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ಜಂಟಿ ಕಾರ್ಯದರ್ಶಿ ಆಗಿರುವ ರೆ. ಫಾ. ಪಾವ್ಲ್ ರೇಗೊರವರು ಅಧ್ಯಕ್ಷತೆ ವಹಿಸಿಕೊಂಡಿದ್ದು, ಆರಿಸಿ ಬಂದ ಸಂಸತ್ತಿನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿ, ನಾಯಕತ್ವ ಗುಣಗಳು ನಿಮ್ಮಲ್ಲಿ ಬೆಳೆಯಬೇಕು. ನಕ್ಷತ್ರಗಳು ಮಿನುಗುವ ಹಾಗೆ ನೀವು ವಿದ್ಯಾ ಸಂಸ್ಥೆಯಲ್ಲಿ ಮೀನುಗಬೇಕು, ನಿಮ್ಮ ಗುರಿ ಉನ್ನತ್ತ ಮಟ್ಟದ್ದಾಗಿರಬೇಕು ಎಂದು ಹೇಳಿ ಪ್ರಮಾಣವಚನ ಬೋಧಿಸಿ ಹರಸಿದರು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗಂಗೊಳ್ಳಿ ಚರ್ಚಿನ ಧರ್ಮ ಗುರುಗಳಾದ ರೆ. ಫಾ ತೋಮಸ್ ರೋಷನ್ ಡಿಸೋಜ ರವರು ’ನೀವೆಲ್ಲ ಭಾವಿ ಪ್ರಜೆಗಳು, ಪ್ರಯತ್ನ ನಿಮ್ಮದಾಗಿರಲಿ, ಧೈರ್ಯದಿಂದ ಮುನ್ನಡೆಯಿರಿ ಎನ್ನುತ್ತಾ ಗುರಿ ಸಾಧನೆಗಾಗಿ ಅಬ್ದುಲ್ ಕಲಾಂ ರವರ ಯಶಸ್ಸಿನ ಮಂತ್ರಗಳನ್ನು ವಿದ್ಯಾರ್ಥಿಗಳಲ್ಲಿ ಹೇಳಿಸಿ’ ಶುಭ ಹಾರೈಸಿದರು
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಪತ್ರಕರ್ತರು, ಕೊಂಕಣಿ-ಕನ್ನಡ ಸಾಹಿತಿಗಳಾದ ಬರ್ನಾರ್ಡ್ ಡಿಕೋಸ್ತಾರವರು ಭಾಗವಹಿಸಿ “ವಿದ್ಯಾರ್ಥಿಗಳಲ್ಲಿ ಜಾತಿ ಮತ ಭಾವನೆಯಿರದೆ, ಕೆಲವೇ ಕೆಲವರ ಪರವಾಗಿ ಸೇವೆ ಮಾಡದೆ, ಎಲ್ಲರು ನಮ್ಮವರು ಏಂಬ ಸಮಾನ ರೀತಿಯಲ್ಲಿ ಸೇವೆ ಮಾಡಿ ಎಲ್ಲರ ಜನನಾಯಕರಾಗಬೇಕು’ ಎನ್ನುತ್ತಾ,ಪ್ರಮಾಣಿಕ ಪರೋಪಕಾರಿ ರೀತಿಯಲ್ಲಿ ಸಮಾಜ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ವಿದ್ಯಾರ್ಥಿ ಮಹಮ್ಮದ್ ಅಫ್ರಾನ್ ’ತನ್ನನ್ನು ಮತ ನೀಡಿ ಆರಿಸಿದ್ದಕ್ಕೆ, ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ’ ಎಂದು ನುಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಶ್ಮಾ ಫೆರ್ನಾಂಡೀಸ್, ಹಾಗೂ ಸಂಸತ್ತಿನ ಬೇರೆ ಬೇರೆ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳ ಲಯಬದ್ಧ ಸಂಗೀತದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಭೌತಶಾಸ್ತ್ರದ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಅಧ್ಯಾಪಕಿ ಪಲ್ಲವಿಯವರು ಸ್ವಾಗತಿಸಿದರು, ವಿದ್ಯಾರ್ಥಿ ಪರಿಷತನ ಕಾರ್ಯದರ್ಶಿ ಜೊನಿಟಾ ಮೆಂಡೊನ್ಸಾ ವಂದಿಸಿದರು , ಪ್ರಥಮ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಆಲಿಸ್ಟನ್ ಕಾರ್ಯಕ್ರಮ ನಿರೂಪಿಸಿದರು.
weat
;