

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ವಾರದ ಆರು ದಿನ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಿಗೆ ಚಾಲನೆ ಕುಂದಾಪುರ:ರಾಜ್ಯ ಸರಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಜಿಂ ಪ್ರೇಮಜೀ ಫೌಂಡೇಶನ್ ಬೆಂಗಳೂರು ಇವರ ಅನುದಾನದ ಸಹಭಾಗಿತ್ವದಲ್ಲಿ ವಾರದ ಆರು ದಿನ ವಿದ್ಯಾರ್ಥಿ ಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು. ಶಾಲಾ ಸಂಚಾಲಕರೂ,ಕುಂದಾಪುರ ವಲಯದ ಧರ್ಮಗುರು ಅತೀ ವಂ.ಪಾ.ಪೌಲ್ ರೋಗೋ ಚಾಲನೆ ನೀಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಶಾಲಾ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಸಿಸ್ಟರ್ ಚೇತನಾ, ಪ್ರೀತಿ ಪಾಯಸ್,ಸ್ಮಿತಾ ಡಿ ಸೋಜಾ,ಸುಶೀಲಾ, ಡೀನಾ ಪಾಯಸ್ ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


