JANANUDI.COM NETWORK

ಕುಂದಾಪುರ, ಮಾ.26: ಜೇಸಿಐ ಕುಂದಾಪುರ ಸಿಟಿ ಘಟಕದ ವತಿಯಿಂದ ಅಕ್ಷಯಪಾತ್ರೆ ಎಂಬ ಕಾರ್ಯಕ್ರಮದಡಿಯಲ್ಲಿ ಕುಂದಾಪುರದ ಸೇಂಟ್ ಜೋಸೆಫ್ ಅನಾಥಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ನಲವತ್ತು ಕ್ಕೂ ಹೆಚ್ಚು ಮಕ್ಕಳಿಗೆ ವಿಶೇಷ ಬಗೆಯ ಊಟವನ್ನು ಬಡಿಸಲಾಯಿತು.
ಕಾರ್ಯಕ್ರಮಕ್ಕೆ ಇದೊಂದು ಉತ್ತಮ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಘಟಕದ ಎಲ್ಲ ಸದಸ್ಯರಿಗೆ ಅನಂತ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಇದೊಂದು ಉತ್ತಮ ಕಾರ್ಯಕ್ರಮದ ಸಾರ್ಥಕತೆಯನ್ನು ಪಡೆದುಕೊಂಡಿರುತ್ತವೆ. ಎಂದು ಜೇಸಿಐ ಕುಂದಾಪುರ ಸಿಟಿ ಘಟಕದ ಅಧ್ಯಕ್ಷ ಅಭಿಲಾಶ್ ತಮ್ಮ ಅನ್ನಿಸಿಕೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ನ ವಿಜಯ್ ಭಂಡಾರಿ, ಪೂರ್ವ ಅಧ್ಯಕ್ಷರಾದ ಚಂದ್ರಕಾಂತ್, ಶ್ರೀಧರ್ ಸುವರ್ಣ, ಉಪಾಧ್ಯಕ್ಷರಾದ ಡಾ|ಸೋನಿ ಡಿಕೋಸ್ತಾ, ಜೇಸಿಐ ಗಳಾದ ಗುರುರಾಜ್, ಪ್ರೇಮಾ ಡಿಕುನ್ಹಾ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಉಪಸ್ಥಿರಿದ್ದು, ಅನಾಥಾಶ್ರಮದ ಮೇಲ್ವಿಚಾರಕಿ ಭಗಿನಿ ಆಶಾ ಹಾಜರಿದ್ದು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.







