ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯ ಇಕೋ ಕ್ಲಬ್ ಉತ್ತಮ: ಜಿಲ್ಲಾಧಿಕಾರಿಗಳಿಂದ ಪ್ರಶಸ್ತಿ

JANANUDI.COM NETWORK




ಕುಂದಾಪುರ,ಜ. 30 ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ರಾಷ್ಟ್ರೀಯ ಹಸಿರು ಪಡೆ, ಉಡುಪಿ ಜಿಲ್ಲೆ ಇವರ ವತಿಯಿಂದ ನಡೆಸಲಾದ ಜಿಲ್ಲಾ ಮಟ್ಟದಲ್ಲಿ ಗುರುತಿಸಿದ ಉತ್ತಮ ಇಕೋ ಕ್ಲಬ್ ಶಾಲೆಗಳಲ್ಲಿ ಕುಂದಾಪುರ ವಲಯದ ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ ಶಾಲೆಯ ಇಕೋಕ್ಲಬ್ ಒಂದಾಗಿದೆ. ದಿನಾಂಕ 29.01.2021 ರಂದು ಜಿಲ್ಲಾದಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಿಸ್ಟರ್ ನಿರ್ಮಲಾ ಪಿಂಟೋರವರು ಜಿಲ್ಲಾಧಿಕಾರಿ ಜಿ.ಜಗದೀಶ್ ಇವರಿಂದ 2020-21ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಇಕೋಕ್ಲಬ್ ಶಾಲಾ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಸ್ವೀಕರಿಸಿದರು.