

ಕುಂದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ:

“ಆಪರೇಷನ್ ಸಿಂದೂರ” ಸೇನಾ ಕಾರ್ಯಾಚರಣೆಯ ಯಶಸ್ಸು ಮತ್ತು ಯೋಧರಿಗೆ ಒಳಿತನ್ನು ಕೋರಿ ಮುಜರಾಯಿ ಇಲಾಖೆ ಆದೇಶದ ಮೇರೆಗೆ ವಿಶೇಷ ಪೂಜೆಯನ್ನು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಪಂಚಾಮೃತ , ಮಂಗಳಾರತಿ ಮತ್ತು ಸಾಮೂಹಿಕ ಪ್ರಾರ್ಥನೆಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವಾಸುದೇವ ಯಡಿಯಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ರಾಜ್ಯ ಐಟಿ ಸೆಲ್ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ , ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್, ಅಶೋಕ್ ಸುವರ್ಣ , ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸತೀಶ್ ಗಾಣಿಗ , ವಿಠಲ್ ಕಾಂಚನ್ , ನಾಗರಾಜ್ ನಾಯಕ್, ದಿನೇಶ್ ಬೆಟ್ಟ , ಸೀಮಾ ಪೂಜಾರಿ , ಗಿರಿಜಾ ಮತ್ತು ಕಾಂಗ್ರೆಸ್ ಸದಸ್ಯರಾದ ಕೋಡಿ ಸುನಿಲ್ ಪೂಜಾರಿ ,ಅರುಣ್ ಪಟೇಲ್ ಇನ್ನಿತರರು ಉಪಸ್ಥಿತರಿದ್ದರು.

ಕುಂದಾಪುರ ಜಾಮೀಯಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ:

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಗೆ , ಇಂದು ಪುರಸಭಾ ವ್ಯಾಪ್ತಿಯ ಮುಸ್ಲಿಂ ಬಾಂಧವರಿಂದ ಫೇರಿ ರಸ್ತೆಯಲ್ಲಿರುವ , ಜಾಮಿಯಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಅಬ್ಬು ಮೊಹಮ್ಮದ್ ಅವರು ಸೈನಿಕರಿಗೆ ಶುಭವನ್ನು ಕೋರಿದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಅಲ್ಪಾಜ್, ದರ್ಗಾದ ಅಧ್ಯಕ್ಷರಾದ ಖಾಸಿಂ ಕೋಯಾ, ಕಾರ್ಯದರ್ಶಿ ತಬರೇಜ್ ಇನ್ನಿತರರು ಉಪಸ್ಥಿತರಿದ್ದರು.
ಹೋಲಿ ರೋಜರಿ ಚರ್ಚ್, ಕುಂದಾಪುರ

ಕುಂದಾಪುರ ಬ್ಲಾಕ್ , ಕ್ರೈಸ್ತ ಬಾಂಧವರಿಂದ ,ಆಪರೇಷನ್ ಸಿಂದೂರ್ ನಲ್ಲಿ ಭಾರತೀಯ ಸೇನೆಯ ಯಶಸ್ಸಿಗೆ ಮತ್ತು ಹುತಾತ್ಮ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಪ್ರಾರ್ಥನೆಯನ್ನು ,ಪವಿತ್ರ ಬಲಿದಾನಗಳ ಪೂಜೆಯೊಂದಿಗೆ , ಹೋಲಿ ರೋಜರಿ ಚರ್ಚ್ ಕುಂದಾಪುರದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮ ಗುರುಗಳಾದ ಅತಿ ವಂದನೀಯ ಪೌಲ್ ರೇಗೊ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಪಂಚಾಯತ್ ಸದಸ್ಯರಾದ ರೋಷನ್ ಬರೆಟ್ಟೊ, ಗ್ಯಾರಂಟಿ ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಪಾಲನಾ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಅಲ್ಪ ಸಂಖ್ಯಾತ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಜೋಸೆಫ್ ರೆಬೆಲ್ಲೊ , ಕೆಥೋಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷ ವಿಲ್ಸನ್ ಅಲ್ಮೇಡಾ, ಘಟಕದ ಮಾಜಿ ಅಧ್ಯಕ್ಷೆ ಶೈಲಾ ಲೂವಿಸ್, ನಿತಿನ್ ಡಿಸೋಜಾ , ಡೊಲ್ಫಿ ಡಿಕೊಸ್ಟಾ , ವೇಲಾ ಬ್ರಗಾಂಜ, ಮೇಬುಲ್ ಡಿಸೋಜಾ , ಪ್ರೇಮ ಡಿಕುನ್ಹಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕೋಡಿ – ಬಿಜೆಎಮ್ ಮಸೀದಿ

ಸೈನಿಕರಿಗೆ ಧೈರ್ಯ ತುಂಬಲು ಹಾಗೂ ಆಪರೇಷನ್ ಸಿಂಧೂರ್ ಯಶಸ್ವಿಗೆ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆಯನ್ನು , ಕೊಡಿ ಭಾಗದ ಬಿ ಜೆ ಎಮ್ ಮಸೀದಿಯಲ್ಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೊಡಿ ,ಪುರಸಭಾ ಸದಸ್ಯರಾದ ಅಬು ಮಹಮ್ಮದ್, ಹಿರಿಯರಾದ ಅಬ್ದುಲ್ಲಾ ಕೊಡಿ , ಸಹಬಾಳ್ವೆ ಸಂಚಾಲಕರಾದ ರಫೀಕ್ , ನಗರ ಯೋಜನಾ ಪ್ರಾಧಿಕಾರ ಸದಸ್ಯರಾದ ಅಲ್ಫಾಜ್ ಹಾಗೂ ಮಸೀದಿಯ ಅಧ್ಯಕ್ಷರು , ಪದಾಧಿಕಾರಿಗಳು ಮತ್ತು ಇನ್ನಿತರ ಭಕ್ತಾದಿಗಳು ಉಪಸ್ಥಿತರಿದ್ದರು.