ಕುಂದಾಪುರ, ಮೇ.6: ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸಭಾ ಭವನದಲ್ಲಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಮಟ್ಟದಲ್ಲಿ ವಾಳೆಯ ಸಮಿತಿ ಸದಸ್ಯರಿಗೆ ಮೇ 4 ರಂದು ಕಿರು ಸಮುದಾಯದ ಬಗ್ಗೆ ತರಬೇತಿ ಶಿಬಿರ ಕಾರ್ಯಕ್ರಮ ನಡೆಯಿತು.
ಶಿಬಿರವನ್ನು ಕೋಟ ಚರ್ಚಿನ ಧರ್ಮಗುರು, ಲೇಖಕರಾದ ವಂ|ಆಲ್ಪೊನ್ಸ್ ಡಿಲಿಮಾ ನಡೆಸಿಕೊಟ್ಟರು. ಕಿರು ಸಮುದಾಯವು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಕಿರು ಸಮುದಾಯದಲ್ಲಿ ನಾವೆಲ್ಲರೂ ಒಂದೇ, ಮೇಲು ಕೀಳು, ಧನಿಕ ಬಡವ ಎಂಬುದು ಇಲ್ಲ, ಕಿರು ಸಮುದಾಯದಲ್ಲಿ ಐಕ್ಯತೆ ಇದೆ. ನಮ್ಮಲ್ಲಿ ಉತ್ತಮ ಬಾಂಧವ್ಯ ಪ್ರೀತಿ ಸಹಕಾರ ಎಲ್ಲವು ಇರುತ್ತದೆ, ನಿತ್ಯವೂ ಪೂಜೆ, ಬಲಿದಾನ, ಪ್ರಾರ್ಥನೆಯಲ್ಲಿ ತೊಡಗಿದ ಮಾತ್ರಕ್ಕೆ ಸಾಲದು, ನಾವು ಕಿರು ಸಮುದಾಯದಲ್ಲಿ ಆಗುವ ಸಭೆಯಲ್ಲಿ ಭಾಗವಹಿಸಬೇಕು’ ಎಂದು ಅವರು ತಿಳಿಸಿದರು. ಸುಮಾರು 65 ಸದಸ್ಯರು ಇದರ ಉಪಯೋಗ ಪಡೆದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಪ್ರಸ್ತಾವಿಕ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಶಿಬಿರದ ಉದ್ದೇಶ ತಿಳಿಸಿದರು. ಕಿರು ಸಮುದಾಯದ ಸಂಯೋಜಕಿ ಝೀಟಾ ಕರ್ವಾಲ್ಲೊ ಸ್ವಾಗತಿಸಿ ತರಬೇತಿಯಲ್ಲಿ ಪಾತ್ರವಹಿಸಿದರು.