ಕುಂದಾಪುರದ ಗೆಳೆಯರ ಬಳಗ ಸ್ವಾವಲಂಬನ ಕೇಂದ್ರಕ್ಕೆ ಬಟ್ಟೆ ಚೀಲ ಹೊಲಿದು ಕೊಡಲು ಬಯಸುವವರಿಗೆ ಹೊಲಿಗೆ ಯಂತ್ರ ಒದಗಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಕೇಂದ್ರದ ಸ್ಥಾಪಕರಾದ ವೆಂಕಟೇಶ ಪೈ ತಿಳಿಸಿದ್ದು, ಈಗ ಕೆಲವು ಹೊಲಿಗೆ ಯಂತ್ರಗಳು ಮಾತ್ರ ಇದ್ದು, ಆಸಕ್ತರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದಿದ್ದಾರೆ. ಉಚಿತ ಪ್ರಾಥಮಿಕ ಹೊಲಿಗೆ ತರಬೇತಿ ನೀಡುತ್ತಾ ಬಂದಿರುವ ಕೇಂದ್ರದಲ್ಲಿ ಹಲವು ವಿನ್ಯಾಸಗಳ ಬಟ್ಟೆಯ ಚೀಲ ಹೊಲಿಯಲು ಅವಕಾಶವಿದೆ.
ಆಸಕ್ತರು ಕುಂದಾಪುರದ ಬಸ್ ಸ್ಟ್ಯಾಂಡ್ ಬಳಿ, ರಾಮ ಮಂದಿರ ರಸ್ತೆಯ ವಿಜಯ ಟೆಕ್ಸ್ಟೈಲ್ ಎದುರಿನ ರಮಾನಂದ ಭಟ್ ಕಂಪೌಂಡ್ಗೆ ಆಗಮಿಸಬಹುದು ಅಥವಾ ವೆಂಕಟೇಶ ಪೈ 9224102053 ಈ ಮೊಬೈಲ್ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.