ಕುಂದಾಪುರ, ಫೆ.12: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕ ಸಂತ ಸಾಬಾಸ್ಟಿಯನರ ಹಬ್ಬವನ್ನು ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಸಮುದಾಯದವರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.ಫೆಬ್ರವರಿ 10 ರಂದು ಸಂಜೆ ಹೇರಿಕುದ್ರು ಎಮಿಲಿಯಾನ್ ಪಾಯ್ಸ್ ಇವರ ಮನೆಯಲ್ಲಿ ವಾಳೆಯವರ ಸಮ್ಮಿಲನ ಕಾರ್ಯಕ್ರಮ ನೆಡೆಯಿತು. ಈ ಸಂದರ್ಭದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಇವರನ್ನು ವಾಳೆಯ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಫಾ|ಸ್ಟ್ಯಾನಿ ತಾವ್ರೊ ‘ನಮ್ಮನ್ನು ಸನ್ಮಾಸಿದ್ದು, ನಿಮಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸುತ್ತದೆ, ಎಂದು ಧನ್ಯವಾದಗಳನ್ನು ಅರ್ಪಿಸಿ, ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ಕಿರು ಸಮುದಾಯದಲ್ಲಿ ದೇವರ ವಾಕ್ಯಗಳನ್ನು ಒದಿ ಅದರ ಪ್ರೇರಣೆಯಿಂದ ದೇವರಲ್ಲಿ ವಿಶ್ವಾಸವನ್ನು ಗಟ್ಟಿಗೊಳಿಸಬೇಕು. ನಿಮ್ಮ ವಾಳೆಯವರು ಚರ್ಚಿನ ಕೆಲಸ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುತ್ತಾರೆ. ನಿಮ್ಮ ವಾಳೆಯು ಅತ್ಯಂತ ಸುಂದರ ಪ್ರಕ್ರತಿಯನ್ನು ಹೊಂದಿದೆ, ನೀವು ಇಲ್ಲೆ ನೆಲೆ ನಿಲ್ಲಬೇಕು, ಎಂದೂ ನಿಮ್ಮ ಕುದ್ರುಗಳನ್ನು ಬಿಡಬಾರದು” ಎಂದು ಶುಭಾಶಯ ಕೋರಿ ಸಂದೇಶ ನೀಡಿದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ದೇವರ ವಾಕ್ಯದ ತಿರುಳನ್ನು ನೀಡಿ ವಾಳೆಯವರಿಗೆ ಕಿರು ಆಟಗಳನ್ನು ನಡೆಸಿಕೊಟ್ಟರು ಮಕ್ಕಳು ಮತ್ತು ಮಹಿಳೆಯರು ನ್ರತ್ಯ ಪ್ರದರ್ಶನ ನೀಡಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಧರ್ಮಭಗಿನಿ ಪ್ರೇಮಿಕಾ, ಕಿರು ಸಮುದಾಯ ಸಂಯೋಜಕಿ ಝೀಟಾ ಕರ್ವಾಲ್ಲೊ ಹಬ್ಬದ ಶುಭಾಶಯಗಳನ್ನು ಕೋರಿದರು, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರೇರಕಿ ಪ್ರಮೀಳಾ ಡಿಸಿಲ್ವಾ ವರದಿ ವಾಚಿಸಿದರು, ವಾಳೆಯಾ ಗುರಿಕಾರ್ಣಿಯಾದ ಜುಲಿಯಾನ ಮಿನೆಜೆಸ್ ಸ್ವಾಗತಿಸಿದರು. ಪ್ರತಿನಿಧಿ ವಿಲ್ಫ್ರೆಡ್ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು. ರೀಶನ್ ಡಿಆಲ್ಮೇಡಾ ಮತ್ತು ಕಿಯಾರ ಪಾಯ್ಸ್ ನಿರೂಪಿಸಿದರು.