

ಕುಂದಾಪುರ: ಇಲ್ಲಿನ ಸೈಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಸಂಭ್ರಮದಿಂದ ಜರಗಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿ ಗಳಿಗೆ ನಾನು ಸುಳ್ಳು ಹೇಳುವುದಿಲ್ಲ.ಬೇರೆಯವರಿಗೆ ವಿನಾ ಕಾರಣ ತೊಂದರೆ ಕೊಡೋದಿಲ್ಲ.ಸಮಾಜ ಮತ್ತು ಕುಟುಂಬದ ನೆಮ್ಮದಿ ಹಾಳು ಮಾಡೋದಿಲ್ಲ.ಬೇರೆಯವರ ವಸ್ತುವಿಗೆ ಆಸೆ ಪಡೋದಿಲ್ಲ ಮತ್ತು ನನ್ನನ್ನು ನಾನು ಕಲುಷಿತಗೊಳಿಸುವುದಿಲ್ಲ ಎನ್ನುವ ಪಂಚ ಪ್ರತಿಜ್ಞೆ ಯನ್ನು ಭೋದಿಸಲಾಯಿತು. ಶಿಕ್ಷಕಿ ಪ್ರೀತಿ ಪಾಯಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಶಿಕ್ಷಕಿಯರಾದ ಸುಶೀಲಾ ಖಾರ್ವಿ,ಡೀನಾ ಪಾಯಸ್,ಶ್ರೀದೇವಿ ಸಹಕರಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ಸಂಯೋಜಿಸಿದರು.





