ಕುಂದಾಪುರ: ಸ್ಥಳೀಯ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಪಿ ಯು ವಿದ್ಯಾರ್ಥಿ ನಿಶಾಂತ್ ಡಿಸೋಜಾ ಚೆಸ್ ಆಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಸ್ ಆಟದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಚೆಸ್ ಮಾಸ್ಟರ್ ಬಿರುದು ಗಳಿಸಿರುವ ನಿಶಾಂತ್ ಡಿಸೋಜಾ, 2023 ರ ಹೊಸವರ್ಷದ ಪ್ರಾರಂಭದಲ್ಲೇ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಆಶ್ರಯದಲ್ಲಿ ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆ ಹಾಗೂ ಎಂ.ಎಂ.ಚೆಸ್ ಡೆವಲಪ್ ಮೆಂಟ್ ಟ್ರಸ್ಟ್ ಇವರ ಆಶ್ರಯದಲ್ಲಿ ತುಮಕೂರಿನಲ್ಲಿ ನಡೆದ ಚೆಸ್ ಪಂದ್ಯಾಟದಲ್ಲಿ 17 ರ ಒಳಗಿನ ವಯೋಮಿತಿಯಲ್ಲಿ ಸ್ಪರ್ಧಿಸಿ ವಿಜೇತನಾಗಿ, ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.ಈತ ಹಂಗಳೂರು ಫ್ರಾನ್ಸಿಸ್ ಮತ್ತು ನೀತಿ ಡಿಸೋಜಾ ದಂಪತಿಯ ಪುತ್ರನಾಗಿದ್ದಾನೆ.
ಈತನ ಈ ಸಾಧನೆಗೆ ಕಾಲೇಜಿನ, ಜಂಟಿ ಕಾರ್ಯದರ್ಶಿ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿ,ರಾಷ್ಟ್ರಮಟ್ಟದಲ್ಲೂ ವಿಜಯಿಯಾಗಲಿ ಎಂದು ಶುಭ ಹಾರೈಸಿದ್ದಾರೆ.