

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನ. 8 ರಂದು ವಾರ್ಷಿಕ ಕ್ರೀಡಾಕೂಟ ಜರುಗಿತು. ಕ್ರೀಡಾಕೂಟದ ಉದ್ಘಾಟಕರಾಗಿ ಆಗಮಿಸಿದ ರೋಟರಿ ಕ್ಲಬ್ ರಿವರ್ ಸೈಡ್ ಕುಂದಾಪುರ ಉಪಾಧ್ಯಕ್ಷರಾಗಿರುವ ರೊ, ಸದಾನಂದ ಉಡುಪ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ರೋಟರಿ ಕ್ಲಬ್ ತೊಡಗಿಸಿಕೊಂಡಿರುವುದು ನಮಗೆ ಸಂತೋಷ ನೀಡಿದೆ. ಕ್ರೀಡೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ ”ಸೋಲೇ ಗೆಲುವಿನ ಸೋಪಾನ” ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಶಾಲಾ ಜಂಟಿ ಕಾರ್ಯದರ್ಶಿಗಳಾದ ಸಿಸ್ಟರ್ ಸುಪ್ರಿಯ ಇವರು ಮಾತನಾಡಿ ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಇರುತ್ತದೆ.ಬಾಲ್ಯದಲ್ಲಿಯೇ ಸದೃಢ ದೇಹವನ್ನು ಬೆಳೆಸಿಕೊಳ್ಳಲು ಕ್ರೀಡೆ ಅತ್ಯಂತ ಸಹಕಾರಿಯಾಗಿರುತ್ತದೆ. ಕ್ರೀಡೆಗಳಿಂದ ನಾಯಕತ್ವ ಗುಣ, ಧೈರ್ಯ, ಪ್ರಾಮಾಣಿಕತೆ, ಹೊಂದಾಣಿಕೆ, ಸಹಕಾರ, ದೈಹಿಕ ಶಕ್ತಿ, ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೇಮಿಕ ಇವರು ಶುಭ ಹಾರೈಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಇವರು ಸ್ವಾಗತಿಸಿದರು. ವಿದ್ಯಾರ್ಥಿಗಳು ವಾದ್ಯ ವೃಂದದೊಂದಿಗೆ ಪಥ ಸಂಚಲನ ನೆರವೇರಿಸಿದರು. ರೋಟರಿ ಕಾರ್ಯದರ್ಶಿಗಳಾಗಿರುವ ರೊ, ರೊನಾಲ್ಡ್ ಡಿ’ ಮೆಲ್ಲೋ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಡಿಸೋಜಾ ಇವರು ಉಪಸ್ಥಿತರಿದ್ದರು. ಶಾಲೆಯ ದೈಹಿಕ ಶಿಕ್ಷಕರಾದ ಮೈಕಲ್ ಸರ್ ಇವರು ಕ್ರೀಡಾಕೂಟದ ಮೇಲುಸ್ತುವಾರಿಯನ್ನು ವಹಿಸಿ, ನೆರೆದಿರುವ ಎಲ್ಲರಿಗೆ ವಂದನೆಗಳನ್ನು ಸಲ್ಲಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.










