ಕುಂದಾಪುರ :ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಅಧ್ಯಕ್ಷರಾಗಿರುವ ರೋ. ಕೆ ಎಸ್ ಮಂಜುನಾಥ್ ’ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ನಾಯಕತ್ವ, ಸಹಕಾರ ಮುಂತಾದ ಗುಣಗಳನ್ನು ಬೆಳೆಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಇಂಟರಾಕ್ಟ್ ಕ್ಲಬ್ ನ ಚಟುವಟಿಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕ್ಲಬ್ಬಿನ ಜಿ. ಎಸ್. ಆರ್. ಆಗಿರುವ ರೋ. ಪಿ ಎಚ್ ಎಫ್. ನರಸಿಂಹ ಹೊಳ್ಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಟರಾಕ್ಟ್ ಅಧ್ಯಕ್ಷರಾಗಿ ಕೃಷ್ಣಪ್ರಸಾದ್, ಉಪಾಧ್ಯಕ್ಷರಾಗಿ ಸಿಂಚನರಾಜು, ಕಾರ್ಯದರ್ಶಿಯಾಗಿ ಸಂಜನಾ, ಉಪ ಕಾರ್ಯದರ್ಶಿಯಾಗಿ ಹರ್ಷಿತ್, ನಿರ್ದೇಶಕರಾಗಿ ರಶ್ಮಿರವಿ, ರಜತ ,ವಿಜೇತ್ ,ಸ್ಪಂದನ ,ಗೌತಮ್, ನಿಹಾಲ್ ಆಯ್ಕೆಯಾದರು.
ರೋಟರಿ ಕ್ಲಬ್ಬಿನ ಉಪಾಧ್ಯಕ್ಷರಾದ ರೊನಾಲ್ಡ್ ಡಿ ಮೆಲ್ಲೋ ,ರೋಟರಿ ಗ್ರಾಮೀಣದಳ ಚೇರ್ ಮ್ಯಾನ್ ಆಗಿರುವ ಮಂಜುನಾಥ ಗಾಣಿಗ ಉಪಸ್ಥಿತರಿದ್ದರು. ಕಾನ್ವೆಂಟಿನಾ ಸುಪೇರಿಯರಾಗಿರುವ ಸಿಸ್ಟರ್ ಸಂಗೀತ ರವರು ಶುಭ ಹಾರೈಸಿದರು. ಶಿಕ್ಷಕರಾದ ಮೈಕಲ್ ಇವರು ನಿರೂಪಿಸಿ ವಂದಿಸಿದರು.