ಕುಂದಾಪುರ, ಮೇ.30: 454 ವರ್ಷಗಳ ಚರಿತ್ರೆ ಹೊಂದಿರುವ, ಐತಿಹಾಸಿಕ ಚರಿತ್ರೆವುಳ್ಳ ಕುಂದಾಪುರ ರೋಜರಿ ಮಾತಾ ಚರ್ಚಿಗೆ ಪ್ರಧಾನ ಧರ್ಮಗುರುಗಳಾಗಿ ಅ|ವಂ|ಪಾವ್ಲ್ ರೇಗೊರವರು ಮೇ 30 ರಂದು ಸಂಜೆ ಅಧಿಕಾರ ಸ್ವೀಕರಿಸಿದರು. ಅವರು ಕುಂದಾಪುರಕ್ಕೆ ಆಗಮಿಸಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಪರವಾಗಿ, ಉಡುಪಿ ಧರ್ಮ ಪ್ರಾಂತ್ಯದ ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರ ನೇತ್ರತ್ವದಲ್ಲಿ, ಈ ಮೊದಲಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಂದ ಅಧಿಕಾರ ಸ್ವೀಕರಿಸಿದರು.ಹಾಗೇಯೆ ಇನ್ನು ಮುಂದೆ ಅ|ವಂ|ಪಾವ್ಲ್ ರೇಗೊರವರು ಕುಂದಾಪುರ ವಲಯದ ಪ್ರಧಾನ ಗುರುಗಳಾಗಿರುತ್ತಾರೆ.
ಅ|ವಂ|ಸ್ಟ್ಯಾನಿ ತಾವ್ರೊ ಮಾತನಾಡಿ ಕುಂದಾಪುರ ಚರ್ಚ್ ಬಹಳ ಪುರಾತನವಾಗಿದ್ದು, ಇಲ್ಲಿ ಸಂತ ಜುಜೆವಾಜ್ ಮಹಾನುಭಾವರು ಧರ್ಮಗುರುಗಳಾಗಿ ಸೇವೆ ಸಲ್ಲಿಸಿದಂತ ಪವಿತ್ರ ಚರ್ಚ್ ಆಗಿದೆ, ಕುಂದಾಪುರದ ಜನತೆ ನನಗೆ ನೀಡಿದ ಪ್ರೀತಿ ಗೌರವ ಎಂದೂ ಮರೆಯುವುದಿಲ್ಲ, ನಿಮ್ಮ ಭಕ್ತಿ, ಪೂಜೆ, ಸಹಕಾರ ವಿಶೇಷವಾದದ್ದು, ಕುಂದಾಪುರದವರು ತುಂಬ ಒಳ್ಳೆಯ ಜನ, ಇದೇ ಪ್ರೀತಿ ನೀವು ಈಗ ಬಂದಿರುವ ಗುರುಗಳಿಗೂ ನೀಡಬೇಕು’ ಎಂದು ತಿಳಿಸಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಅ|ವಂ|ಪಾವ್ಲ್ ರೇಗೊ ‘ಈ ಚಾರಿತ್ರಿಕ ಹಿನ್ನೆಲೆಯುಳ್ಳ ಇಗರ್ಜಿಯಲ್ಲಿ ನನಗೆ ಸೇವೆ ಮಾಡಲು ಸಿಕ್ಕಿದು,್ದ ನನ್ನ ಭಾಗ್ಯ. ಎಂದು ಹೇಳುತ್ತಾ ‘ನಾನು ಯೇಸು ಕ್ರಿಸ್ತರ ಮಾರ್ಗದರ್ಶನದಲ್ಲಿ ಇಲ್ಲಿ ಸೇವೆ ಮಾಡಲು ಬಂದಿದ್ದೆನೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನೀವು ನನ್ನನ್ನು ಪ್ರೀತಿಸಿರಿ, ನಿಮ್ಮ ಸಹಕಾರದಿಂದ ಉತ್ತಮ ಸೇವೆ ನೀಡುತ್ತೇನೆ’ ಎಂದು ತಿಳಿಸುತ್ತಾ ಕಾರ್ಕಳ ಮಿಯಾರ್ ಚರ್ಚಿನಿಂದ ಅ|ವಂ|ಪಾವ್ಲ್ ರೇಗೊರವರನ್ನು ಬಿಳ್ಕೋಡಲು ಅನೇಕ ಜನರು ಬಂದಿದ್ದು, ಅವರಿಗೆ ಅವರು ಧನ್ಯವಾದ ಅರ್ಪಿಸಿದರು
ಮೊನ್ಸಿಂಜೊರ್ ಅ|ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ಈ ಇಗರ್ಜಿಗೆ ತನ್ನದೆ ಆದ ಇತಿಹಾಸ ಇದೆ, ಇದು ನಾನು ಹುಟ್ಟಿದ ಇಗರ್ಜಿ ಕೂಡ ಆಗಿದೆ. ಇದು ಕುಂದಾಪುರ ವಲಯದ ಪ್ರಮುಖ ಇಗರ್ಜಿ, ಅದಕ್ಕಾಗಿ ಬಹಳ ಪ್ರತಿಭೆಯುಳ್ಳ, ಬಹಳ ಉತ್ಸಾಹದ ಗುರುಗಳಾದ ಅ|ವಂ|ಪಾವ್ಲ್ ರೇಗೊರವರನ್ನು, ಇಲ್ಲಿ ಬಿಷಪ್ ರವರು ನಿಯುಕ್ತಿ ಮಾಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ, ಕಾರ್ಕಳ ಮಿಯಾರ್ ಚರ್ಚಿನಲ್ಲಿ ಅವರು ಉತ್ತಮ ಸೇವೆ,ಕೆಲಸ ಮಾಡಿದ್ದಾರೆ, ಇಲ್ಲಿಯೂ ಮಾಡುತ್ತಾರೆ’ ಎಂದು ಶುಭ ಕೋರಿದರು..
ಪಾಲನ ಮಂಡಳಿಯ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಚರ್ಚಿನ ಕುಟುಂಬಗಳ ದಾಖಲಾತಿಯ ಪುಸ್ತಕ ನೂತನ ಗುರುಗಳಿಗೆ ಹಸ್ತಾಂತರಿಸಿ. ಚರ್ಚಿನ ಪರಿಚಯ ನೀಡಿದರು. ಕಾರ್ಯಕ್ರಮದಲ್ಲಿ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು ಪಾಲನಮಂಡಳಿ ಸದಸ್ಯರು, ಕುಂದಾಪುರ ಚರ್ಚಿನ ಭಕ್ತಾಧಿಗಳು ಹಾಜರಿದ್ದರು. ಕಾರ್ಯದರ್ಶಿ ಆಶಾ ಕರ್ವಾಲ್ಲೊ ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಕಾರ್ಯಕ್ರಮ ನಿರೂಪಿಸಿದರು.