JANANUDI.COM NETWORK
ಕುಂದಾಪುರ, ಎ.20: ಹೋಲಿ ರೋಜರಿ ಚರ್ಚ್ ವ್ಯಾಪ್ತಿಯಲ್ಲಿ ನಡೆದ 5 ರಿಂದ 10 ನೇ ತರಗತಿಯ ಕ್ರೈಸ್ತ ಮಕ್ಕಳ ಎರಡು ದಿವಸಗಳ ಬೇಸಿಗೆ ರಜೆ ಶಿಬಿರ ಇಂದು 20-4-22 ರಂದು ಯಶಸ್ವಿಯಾಗಿ ಸಮಾರೋಪಗೊಂಡಿತು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಈ ಶಿಬಿರದಿಂದ ನಿಮಗೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಬೇಕಾದ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದಿರಿ, ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಇಂತಹ ಶಿಬಿರಗಳು ಅಗತ್ಯ, ನೀವು ಜೀವನದಲ್ಲಿ ಊಟ, ಆಟ, ಪಾಠ ಮತ್ತು ಸ್ತೋತ್ರಪಾಠಕ್ಕೆ (ಪ್ರಾರ್ಥನೆಗೆ) ಪ್ರಾಮುಖ್ಯತೆ ನೀಡಬೇಕು” ಎಂದು ಸಂದೇಶ ನೀಡಿದರು.
ಶಿಬಿರದ ನೇತ್ರತ್ವ ವಹಿಸಿದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಈ ಶಿಬಿರ ಯಶಸ್ವಿಯಾಗಲು ಹಲವರು ಕಾರಣಾರಾಗಿದ್ದಾರೆ, ಗುಂಪುಗಳ ಸಚೇತಕರು, ಶಿಬಿರದ ಮಕ್ಕಳಿಗೆ ಊಟ ಪಾನೀಯ ಸಿದ್ದಪಡಿಸಿದ ರೋಜರಿ ಚರ್ಚಿನ ಸ್ತ್ರೀ ಸಂಘಟನೆ ಸದಸ್ಯರಿಗೆ, ಸಂಗೀತ, ಪವರ್ ಪೌಯಿಂಟ್, ಡಿಜೆ, ನಿರ್ವಹಣೆ ಮಾಡಿದ ಸ್ಯಾಮ್ಯುವೇಲ್ ಲುವಿಸ್, ರೆನ್ಸನ್ ಡಿಸೋಜಾ ಇನ್ನಿತರರಿಗೆ ಕ್ರತ್ಜತೆ ಸಲ್ಲಿಸಿ, ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಒಂದು ದಿನದ ಪ್ರವಾಸ ಇದೆಯೆಂದು ತಿಳಿಸಿದರು.
ಶಿಬಿರದಲ್ಲಿ ಮಾಧ್ಯಮ ಜಾಗ್ರತಿ, ಕೊಂಕಣಿ ಭಾಷೆಯ ಪ್ರಾಮುಖ್ಯತೆ ಮತ್ತು ಇಂದಿನ ಮಕ್ಕಳಿಗೆ ಸಂಸ್ಕ್ರತಿಯ ಅರಿವು, ಗುಂಪು ಆಟ ಮತ್ತು ಚಟುವಟಿಕೆಗಳು, ಪ್ರಾರ್ಥನೆಯಲ್ಲಿ ಸಕ್ರೀಯ ಭಾಗವಹಿಸುವಿಕೆ, ಬೈಬಲ್ ಮತ್ತು ಕ್ರೈಸ್ತ ನಂಬಿಕೆ, ಜೀವನ ಮತ್ತು ವ್ರತ್ತಿ ಮಾರ್ಗದರ್ಶನ ಹಾಗೂ ಇನ್ನಿತರ ವಿಷಯಗಳು ಶಿಬಿರದಲ್ಲಿ ಅಡಕವಾಗಿದ್ದವು. ಶಿಬಿರದ ವಿದ್ಯಾರ್ಥಿಗಳಲ್ಲಿ ನಾಲ್ಕು ಗುಂಪುಗಳನ್ನಾಗಿಸಿ ಅವರ ಚಟುವಟಿಕೆ ಆಧರಿಸಿ ಅಂಕಗಳನ್ನು ನೀಡಲಾಯಿತು. ಶಿಕ್ಷಕಿ ಶಾಂತಿ ಬಾರೆಟ್ಟೊ ನಿರೂಪಿಸಿ ಶಿಕ್ಷಕಿ ಸೆಲಿನ್ ಬಾರೆಟ್ಟೊ ಧನ್ಯವಾದಗಳನ್ನು ಸಮರ್ಪಿಸಿದರು.