ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚ್ ನೂತನ ಪಾಲನ ಮಂಡಳಿ ರಚನೆಯಾಗಿ ಜನವರಿ 1 ರಿಂದ ಚಾಲನೆಗೆ ಬಂದಿದೆ.
ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಕುಂದಾಪುರ ರೋಜರಿ ಚರ್ಚ್ ಪಾಲನ ಮಂಡಳಿ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಶಾಲೆಟ್ ರೇಬೆಲ್ಲೊ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿಯಾಗಿ ಪ್ರೇಮಾ ಡಿಕುನ್ಹಾ ಪುನರ್ ಆಯ್ಕೆಗೊಂಡಿದ್ದಾರೆ, ಆರ್ಥಿಕ ಸಮಿತಿಯ ಸದಸ್ಯರಾಗಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಹುದ್ದೆ ಹಕ್ಕಿನಿಂದ, ಜೋನ್ಸನ್ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ಡಾ|ಸೋನಿ ಡಿಕೋಸ್ತಾ ಮತ್ತು ಸೆರಾಫಿನ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ.
13 ವಾಳೆಯ ಗುರಿಕಾರರು, ವಾಳೆಯ ಪ್ರತಿನಿಧಿಗಳು, ಹಲವು ಸಂಘಸಂಸ್ಥೆಗಳ, ಧರ್ಮಭಗಿನಿಯರ ಪ್ರತಿನಿಧಿಗಳು ಪಾಲನ ಮಂಡಳಿಯಲ್ಲಿ ಇದ್ದು, ಸುಮಾರು 40 ಮಂದಿಯ ಸದಸ್ಯತನವಿದ್ದ ನೂತನ ಮಂಡಳಿಯ ಸದಸ್ಯರು 2022 ರ ಡಿಸೆಂಬರ್ 31 ರಂದು ಸಂಜೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಮಂಡಳಿಯು ಮುಂದಿನ 3 ವರ್ಷಗಳ ತನಕ ಅಧಿಕಾರದಲ್ಲಿರುವುದು. ಅ|ವಂ| ಸ್ಟ್ಯಾನಿ ತಾವ್ರೊ ನೂತನ ಪಾಲನ ಮಂಡಳಿಗೆ ಅಭಿನಂದಿಸಿದರು. ಕಳೆದ ಮೂರು ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ನೀಡಿದ ಎಲ್.ಜೆ.ಫೆರ್ನಾಂಡಿಸ್ ಇವರನ್ನು ಗೌರವಿಸಲಾಯಿತು.