ಕುಂದಾಪುರ, ಮೇ,27: ಕುಂದಾಪುರದ ಭಾಗ್ಯವಂತೆ ರೋಜರಿ ಮಾತ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಹಾಗೂ ಸಹಾಯಕ ಧರ್ಮಗುರು ವಂ|ಫಾ|ಅಶ್ವಿನ್ ಆರಾನ್ನ ಇವರಿಗೆ ವರ್ಗವಣೆ ಇರುವುದರಿಂದ ಮೇ 26 ರಂದು ಇಬ್ಬರಿಗೂ ಧರ್ಮಕೇಂದ್ರದ ವತಿಯಿಂದ ಬಿಳ್ಕೋಡುಗೆ ಕಾರ್ಯಕ್ರಮವನ್ನು ನಡೆಸಲಾಯಿತು. ಫಾ|ಸ್ಟ್ಯಾನಿ ತಾವ್ರೊ ಇವರಿಗೆ ಕೋಟ ಸಂತ ಜೋಸೆಫ್ ಚರ್ಚಿಗೆ ವರ್ಗಾವಣೆ ಮತ್ತು ಫಾ|ಅಶ್ವಿನ್ ಆರಾನ್ನ ಇವರಿಗೆ ಉಡುಪಿ ಧರ್ಮಪ್ರಾಂತ್ಯದ ಅನುಗ್ರಹಕ್ಕೆ ‘ಯಾಜಕತ್ವ ಅಹ್ವಾನ’ ಕೇಂದ್ರದ ಮತ್ತು ಬಾಲಯೇಸು ಪಂಗಡದ ನಿರ್ದೇಶಕರಾಗಿ ಭಡ್ತಿಯ ವರ್ಗಾವಣೆ ವರ್ಗಾವಣೆ ಆದೇಶ ಬಂದಿದೆ..
ಫಾ|ಅಶ್ವಿನ್ ಆರಾನ್ನ ಅವರನ್ನು ಧರ್ಮಕೇಂದ್ರದ ಪರವಾಗಿ ಫಾ|ಸ್ಟ್ಯಾನಿ ತಾವ್ರೊ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಇವರು ಫಲ ಪುಷ್ಪ ನೀಡಿ ಶಾಲು ಹೊದೆಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಸಮ್ಮಾನ ಪತ್ರವನ್ನು ಕಾರ್ಯದರ್ಶಿ ಆಶಾ ಕರ್ವಾಲ್ಲೊ ವಾಚಿಸಿದರು.
ಅ|ವಂ|ಫಾ|ಸ್ಟ್ಯಾನಿ ತಾವ್ರೊ ಅವರನ್ನು ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯಾ, ಫಾ|ಅಶ್ವಿನ್ ಆರಾನ್ನ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇವರು ಫಲ ಪುಷ್ಪ ನೀಡಿ ಶಾಲು ಹೊದೆಸಿ ಸನ್ಮಾನ ಪತ್ರ ನೀಡಿ ಗೌರವಿಸಿದರು. ಸನ್ಮಾನ ಪತ್ರವನ್ನು ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೇಲ್ಲೊ ವಾಚಿಸಿದರು
ಸನ್ಮಾನಕ್ಕೆ ಉತ್ತರವಾಗಿ ಅ|ವಂ|ಫಾ|ಸ್ಟ್ಯಾನಿ “ನೀವು ನಮಗೆ ತುಂಬ ಪ್ರೀತಿ ನೀಡಿದ್ದಿರಿ, ನನ್ನ ಜೀವಮಾನದಲ್ಲಿ ಈ ರೋಜರಿ ಚರ್ಚನ್ನು ಮರೆಯುವುದಿಲ್ಲ, ನೀವು ನಮಗೆ ಇಲ್ಲಿ ಉತ್ತಮ ಧಾರ್ಮಿಕ ಸೇವೆಗೆ ಉತ್ತಮವಾಗಿ ಸಹಕರಿಸುತ್ತೀರಿ, ಎಲ್ಲಾ ರೀತಿಯಿಂದಲೂ ರೋಜರಿ ಮಾತೆ ನನಗೆ ಆಶಿರ್ವದಿಸಿದ್ದಾಳೆ, ಇಲ್ಲಿ ನಾನು ಏನಾದರೂ ಅಭಿವ್ರದ್ದಿಯ ಕೆಲಸವನ್ನು ನಾನು ಮಾಡಿದ್ದರೆ, ಅದು ನಿಮ್ಮ ಸಹಕಾರದಿಂದ ನಾನು ಮಾಡಿದ್ದೇನೆ. ನಾನು ಹೆಚ್ಚಿನ ಕಡೆ ಮೇರಿ ಮಾತೆಗೆ ಸಮರ್ಪಿಸಲ್ಪಟ್ಟ ಇಗರ್ಜಿಗಳಲ್ಲಿ ಸೇವೆ ನೀಡಿದ್ದೇನೆ, ಈಗ ಮೇರಿ ಮಾತೆ ಅಪ್ಪಣೆಯಂತೆ ಸಂತ ಜೋಸೆಫರು ನನಗೆ ಮತ್ತು ಯೇಸುವಿಗೆ ರಕ್ಷಣೆ ಕೊಟ್ಟಿದ್ದರು, ನಿನಗೂ ರಕ್ಷಣೆ ನೀಡುತ್ತಾರೆ ಅದಕ್ಕಾಗಿ ನೀನು ನನ್ನ ಪತಿ ಸಂತ ಜೋಸೆಫರ ಇಗರ್ಜಿಗೆ ಹೋಗಿ ಸೇವೆ ನೀಡು ಎಂದು ಹೇಳುವಂತೆ ನನಗೆ ಭಾಸವಾಗುತ್ತೆ, ನೀವು ನನ್ನ ಮುಂದಿನ ಧಾರ್ಮಿಕ ಸೇವೆಯ ಜೀವನ ಫಲಪ್ರದವಾಗಲು ಪ್ರಾರ್ಥಿಸಬೇಕೆಂದು” ತಿಳಿಸಿದರು.
ಫಾ|ಅಶ್ವಿನ್ ಆರಾನ್ನ ಮಾತನಾಡಿ ನನ್ನ ಧಾರ್ಮಿಕ ಜೀವನದಲ್ಲಿ ಕುಂದಾಪುರದವರ ಪಾತ್ರ ಎಂದಿಗೂ ಮರೆಯುವುದಿಲ್ಲಾ, ನಾನು ಇಲ್ಲಿ ಎನಾದರೂ ಸೇವೆ ನೀಡಲು ನನಗೆ ಸಾಧ್ಯವಾದರೆ, ನಿಮ್ಮ ಪ್ರೀತಿ ಉತ್ತಮ ಸಹಕಾರದಿಂದ, ಹಾಗೇ ನಮ್ಮ ಪ್ರಧಾನ ಧರ್ಮಗುರುಗಳಾದ ಅ|ವಂ|ಫಾ|ಸ್ಟ್ಯಾನಿ ತಾವ್ರೊರವರು ಕಾರಣ, ಅವರ ಉತ್ತಮ ಮಾರ್ಗದರ್ಶನ, ಪ್ರೇರಣೆ ನನ್ನ ಮುಂದಿನ ಧಾರ್ಮಿಕ ಜೀವನಕ್ಕೆ ಸಹಕಾರಿಯಾಗಲಿದೆ. ನಿಮ್ಮೆಲ್ಲರ ಪ್ರೀತಿಗೆ ತುಂಬು ಧನ್ಯವಾದಗಳು, ನನ್ನ ಮುಂದಿನ ಧಾರ್ಮಿಕ ಜೀವನಕ್ಕಾಗಿ ನೀವು ಪ್ರಾರ್ಥಿಸಿ, ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದು ತೀಳಿಸಿದರು.
ಖ್ಯಾತ ಕೊಂಕಣಿ ಗಾಯಕ ವಿಲ್ಸನ್ ಒಲಿವೆರಾ ರಚಿಸಿದ ವಿದಾಯ ಗೀತೆಯನ್ನು ಚರ್ಚ್ ಗಾಯನ ಮಂಡಳಿ ಮತ್ತು ವಿಲ್ಸನ್ ಒಲಿವೆರಾ ಹಾಡಿದರು. ಧರ್ಮಕೇಂದ್ರದ ರೋಜಾರಿಯುಮ್ ಪತ್ರದ ಈ ಸಲ ಧರ್ಮಗುರುಗಳ ನಿರ್ಗಮನ ನಿಮಿತ್ತ ವೀಶೆಷ ಸಂಚಿಕೆಯನ್ನು ಫಾ|ಸ್ಟ್ಯಾನಿ ತಾವ್ರೊ ಸಂಪಾದಕ ಬರ್ನಾಡ್ ಡಿಕೋಸ್ತಾ, ಸಹಸಂಪಾದಕ ಒಸ್ವಲ್ಡ್ ಕರ್ವಾಲ್ಲೊ ಮತ್ತು ಅತಿಥಿಗಳೊಂದಿಗೆ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪಾಲನಮಂಡಳಿಯ ಸದಸ್ಯರು, ಹಣಕಾಸು ಸಮಿತಿಯ ಸದಸ್ಯರು ಮತ್ತು ಧರ್ಮಕೇಂದ್ರದ ಭಕ್ತಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಇಬ್ಬರು ಧರ್ಮಗುರುಗಳನ್ನು ಅರ್ಪಿಸಿ ಶುಭಕೋರಿದರು.
ಕಾರ್ಯಕ್ರಮವನ್ನು ಡಾ.ಸೋನಿ ಡಿಕೋಸ್ತಾ ನಿರೂಪಿಸಿದರು, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಧನ್ಯವಾದ ಆರ್ಪಿಸಿದರು.