

ಕುಂದಾಪುರ :ಖ್ಯಾತ ಸ್ತ್ರೀರೋಗ ತಜ್ಞ, ಪರಿಸರ ಪ್ರೇಮಿ, ಪಕ್ಷಿ ತಜ್ಞ ಎಡ್ತರೆ ನರ್ಸಿಂಗ್ ಹೋಮ್ ಮಾಲಿಕ ಡಾ. ಎಚ್ ಸುಭೋದ್ ಕುಮಾರ್ ಮಲ್ಲಿ ಸೋಮವಾರ ರಾತ್ರಿ ನಿಧನರಾದರು
ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಖ್ಯಾತರಾಗಿರುವ ಇವರು ಪರಿಸರ ಪ್ರೇಮಿ ಯಾಗಿದ್ದುಕೊಂಡು ಪಕ್ಷಿ ಸಂಕುಲ ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ಥ್ಯದ ಕುರಿತು ಅಪಾರ ಕಾಳಜಿ ಹೊಂದಿದ್ದವರು.ಈ ಕುರಿತಾಗಿ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.
ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಮೂಲಕ ಸಾಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ