ಕುಂದಾಪುರ: ರೇಡಿಯೋ ಕುಂದಾಪ್ರ 89.6 FM ಎಂಬ ಈ ಬಾನುಲಿ ಕೇಂದ್ರವು ಬಹಳ ಒಳ್ಳೆಯ ರೀತಿಯಲ್ಲಿ ನಡೆದು ಇದರಿಂದ ಸುತ್ತಮುತ್ತಲಿನ ಜನರಿಗೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿ ಎಂದು ಡಾ. ಎಚ್.ಎಸ್ ಬಲ್ಲಾಳ್, ಅಧ್ಯಕ್ಷರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಈಒ ಸಮುದಾಯ ಬಾನುಲಿ ಕೇಂದ್ರವನ್ನ ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು.
ವರದರಾಯ ಪೈ, ಕಾರ್ಯದರ್ಶಿಗಳು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಕಲೆ, ಸಾಹಿತ್ಯ, ಕೃಷಿ ಮತ್ತು ಮೀನುಗಾರಿಕೆ ಎಲ್ಲದರ ಬಗ್ಗೆ ಮಾಹಿತಿ ಕೊಡುವಂತಹ ವೇದಿಕೆ ನಿಮಗೆ ಸಜ್ಜಾಗಿದೆ.ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಸೂಕ್ತವಾದ ವೇದಿಕೆ. ಎಲ್ಲಾ ಸಮುದಾಯದವರು ಇಲ್ಲಿಗೆ ಬಂದು ಕಾರ್ಯಕ್ರಮವನ್ನ ಕೊಟ್ಟು ಈ ರೇಡಿಯೋ ಕುಂದಾಪ್ರವನ್ನು ಅತ್ಯಂತ ಪ್ರಸಿದ್ದಿಯನ್ನು ಹೊಂದುವಂತೆ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ .ಶಾಂತರಾಮ್ ಪ್ರಭು ವಹಿಸಿದ್ದರು. ಇವರು ರೇಡಿಯೋ ಕುಂದಾಪುರದ ಉಪಯೋಗವನ್ನು ವಿದ್ಯಾರ್ಥಿಗಳು ಸಂಘ ಸಂಸ್ಥೆ ಸಾರ್ವಜನಿಕರೆಲ್ಲರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಯು.ಎಸ್. ಶೆಣೈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಭಂಡರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳರ್, ಕೆ.ದೇವದಾಸ್ ಕಾಮತ್, ಸದಾನಂದ ಛಾತ್ರ, ಜಯಕರ ಶೆಟ್ಟಿ, ಪ್ರಜ್ಞೇಶ್ ಪ್ರಭು, ಪ್ರಕಾಶ್ ಟಿ ಸೋನ್ಸ್, ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯದ ಪ್ರೊ.ಸತ್ಯನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅತಿಥಿಗಳನ್ನು ಸ್ವಾಗತಿಸಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ. ಎಂ ಗೊಂಡ ವಂದಿಸಿ, ಉಪನ್ಯಾಸಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮವನ್ನು ನಿರೂಪಿಸಿದರು.