

“ಹದಿಹರೆಯವೆನ್ನುವುದು ತಂಬಾಕು ಸೇವಿಸಬೇಕೆನ್ನುವ ಆಮಿಷಗಳಿಗೆ ಒಳಗಾಗುವ ಆರಂಭಿಕ ಹಂತ. ವೈಯುಕ್ತಿಕ ಆರೋಗ್ಯದ ಮೇಲೆ ತಂಬಾಕು ಸೇವನೆ ಬೀರುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಯುವಜನರು ಗಂಭೀರವಾಗಿ ಯೋಚಿಸಿ, ಆರೋಗ್ಯ ಇಲಾಖೆ ಹೊರಡಿಸುವ ಮುನ್ನೆಚ್ಚರಿಕಾ ಮಾಹಿತಿಗಳು ಸಂದೇಶಗಳನ್ನು ಚೆನ್ನಾಗಿ ಮನಗಂಡು ತಂಬಾಕು- ಮುಕ್ತ ಸಮಾಜ ಸೃಷ್ಟಿಯಾಗಬೇಕು” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಸೆಲ್ ನ ಆರೋಗ್ಯಾಧಿಕಾರಿಯಾದ ಶ್ರೀಮತಿ ಮಂಜುಳಾ ಶೆಟ್ಟಿ ಯವರು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರಿ ನವೀನ್ ಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳು ಉತ್ತಮ ನಾಗರೀಕರಾಗುವುದೆಂದರೆ ಮುಖ್ಯವಾಗಿ ಆರೋಗ್ಯವಂತ ಸಮಾಜ ಕಟ್ಟುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವುದು ಎಂದು ತಿಳಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈ ಧನ್ಯವಾದ ಸಲ್ಲಿಸಿದರು.
