

ಕುಂದಾಪುರ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಪರಿಸರ ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಗಿಡಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾದ ‘ ಗ್ರೋ ಗ್ರೀನ್’ ಕಾರ್ಯಕ್ರಮ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಸಸ್ಯಸಂಕುಲವನ್ನು ಉಳಿಸಿ ಬೆಳೆಸಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್.ಸಿ.ಸಿ ಘಟಕದ ವಿದ್ಯಾರ್ಥಿ ಸುಪ್ರಜ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿಯವರು, ಉಪನ್ಯಾಸಕರಾದ ಸುಷ್ಮಾ ಶೆಣೈ, ದೀಪಾ ಶೆಟ್ಟಿ, ನಾಗರತ್ನಾ, ಜ್ಯೋತಿ, ರೂಪಾ, ಅಕ್ಷತಾ ಕೆ.ಎನ್, ಅರುಣಾ ಹೊಳ್ಳ,ರೇಖಾಪುತ್ರನ್, ಈಶ್ವರ್, ನಿತ್ಯಾನಂದ ದೇವಾಡಿಗ ಹಾಗೂ ಬೋಧಕೇತರ ಸಿಬ್ಬಂಧಿಯವರು ಉಪಸ್ಥಿತರಿದ್ದರು. ಎನ್.ಸಿ.ಸಿ ಲೆ| ಹರೀಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.