

ಕುಂದಾಪುರ,ಜು.೧೫: ಸ್ಥಳೀಯ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸಕ್ತ ಮಣಿಪಾಲದ ಎಮ್. ಐ. ಟಿ ಯಲ್ಲಿ ಎರೋನಾಟಿಕಲ್ಸ್ ನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿರುವ ಶ್ರೀ ಫ್ಲೆಕ್ಸನ್ ನಝ್ರತ್ ಇವರು ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ವಿಷಯದಲ್ಲಿ ಸರಳ ನೈಪುಣ್ಯತೆಯನ್ನು ಪಡೆದು ಸೂಕ್ತವಾದ ಔದ್ಯೋಗಿಕ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ಲಭ್ಯವಿರುವ ವಿವಿಧ ಅವಕಾಶಗಳ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ದ್ವಿತೀಯ ಪಿ.ಯು. ಸಿ ವಿಜ್ಞಾನ ವಿಭಾಗದ ವೈಷ್ಣವಿ ಭಂಡಾರಿಯವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.