JANANUDI.COM NETWORK
ಕುಂದಾಪುರ: ‘ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಅಳುಕು -ಅಂಜಿಕೆಗಳಂಥ ಭಾವನಾತ್ಮಕ ತೊಡಕುಗಳು ಸಹಜ. ಅಂಥ ಅಡ್ಡಿ- ಆತಂಕಗಳನ್ನು ಕೆಲವು ಸರಳ ಮಾನಸಿಕ ಕೌಶಲ್ಯದ ಚಟುವಟಿಕೆಗಳ ಮೂಲಕ ಹತ್ತಿಕ್ಕಿ, ಮನೋಬಲ ಹೆಚ್ಚಿಸಿಕೊಂಡು ಪರೀಕ್ಷಾ ಕಾರ್ಯದಲ್ಲಿ ಸಫಲತೆ ಪಡೆಯಬೇಕು ” ಎಂದು ಬೆಂಗಳೂರಿನ ನಿಹಾರಿಕಾ ಲರ್ನಿಂಗ್ ಸ್ಪೇಸ್ ಸಂಸ್ಥೆಯ ಖ್ಯಾತ ತರಬೇತುದಾರರಾದ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರೀಲತಾ ಧನ್ಯಾ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಪರೀಕ್ಷೆಯನ್ನು ಎದುರಿಸಲು ಬೇಕಾಗುವ ಆತ್ಮಸ್ಥೈರ್ಯ ‘ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ದೃಶ್ಯಾವಳಿ- ನಿದರ್ಶನಗಳ ಮೂಲಕ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರ್ವಹಿಸಿದರು.