

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಇಂಡಸ್ಟ್ರಿಯಲ್ ವಿಸಿಟ್’ ( ಕೈಗಾರಿಕಾ ಕೇಂದ್ರಕ್ಕೆ ಭೇಟಿ) ನ ಅಂಗವಾಗಿ ಉಪ್ಪೂರಿನ ‘ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ‘ ಘಟಕ ಹಾಗೂ ಮಸಾಲೆ ಉತ್ಪನ್ನ ಮತ್ತು ಮಾರಾಟದ ಗೃಹ ಕೈಗಾರಿಕಾ ಕೇಂದ್ರವಾದ ವಕ್ವಾಡಿಯ ‘ಆನೆಗುಡ್ಡೆ ಉಪಾಧ್ಯಾಯ ಇಂಡಸ್ಟ್ರೀಸ್ ‘ ಗೆ ಭೇಟಿಯನ್ನು ಆಯೋಜಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಷ್ಮಾ ಶೆಣೈ ಮತ್ತು ಇತರ ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಕೈಗಾರಿಕಾ ವಲಯದಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಜೊತೆಗೂಡಿದರು.