” ಗಾಂಧೀಜಿಯವರ ಕೆಲವು ತತ್ವಗಳನ್ನು ಅನುಷ್ಠಾನಗೊಳಿಸಿ ಪಾಲಿಸಿದವರು ಲಾಲ್ ಬಹದ್ದೂರ್ ಶಾಸ್ತ್ರೀಜೀಯವರು. ಸ್ವಾತಂತ್ರ್ಯಪೂರ್ವದ ಹೋರಾಟದಲ್ಲಿ ಪ್ರಮುಖರಾದವರು ಗಾಂಧೀಜಿಯವರಾದರೆ, ಸ್ವಾತಂತ್ರ್ಯಾನಂತರ ದೇಶದ ಆಡಳಿತವನ್ನು ಅರ್ಥಪೂರ್ಣವಾಗಿ ನಡೆಸಿದವರು ಶಾಸ್ತ್ರೀಜಿಯವರು” ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಗಾಂಧಿಜೀ-ಶಾಸ್ತ್ರಿಜಿ ಜಯಂತಿಯ ಅಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ ತಿಳಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿಯವರು, ಶಿಕ್ಷಕರಾದ ನಾವು ನಮ್ಮ ಸಮಾಜ, ತಾಲೂಕು, ಜಿಲ್ಲೆಯಂಥ ಮೂಲ ಮಟ್ಟದಿಂದ ಈ ಇಬ್ಬರು ಮಹಾನ್ ನಾಯಕರು ಪ್ರತಿಪಾದಿಸಿದ ಮೌಲ್ಯಗಳನ್ನು ಪಸರಿಸಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿರಾಡಂಬರ ಸರಳ ಜೀವನ ಮತ್ತು ಉದಾತ್ತ ವ್ಯಕ್ತಿತ್ವದ ಬಗ್ಗೆ ಸವಿವರವಾಗಿ ತಿಳಿಸಿದರು. ಈ ಇಬ್ಬರು ರಾಷ್ಟ್ರನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು